Monday, December 9, 2024

ಮಹಾಲಯ ತಿಂಗಳು ಕೃಷ್ಣ ಪಕ್ಷ / ಪಿತೃ ಪಕ್ಷದ ಅವಧಿಯಲ್ಲಿ ಕಾಗೆಗಳಿಗೆ ಆಹಾರ ಏಕೆ ಕೊಡುತ್ತೇವೆ – ಒಂದು ವೈಜ್ಞಾನಿಕ ವಿಮರ್ಶೆ

ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದ ಬರಹವಿದು..!

ನಾವು ಸನಾತನ ಧರ್ಮದವರು ಪಿತೃ ಪಕ್ಷದ ಸಮಯದಲ್ಲಿ ನಮ್ಮ ಪೂರ್ವಜರಿಗೆ ಆಹಾರ ಅರ್ಪಿಸುವದಕ್ಕೆ ಕಾಗೆಗಳಿಗೆ ಆಹಾರವನ್ನು ಏಕೆ ಅರ್ಪಿಸುತ್ತೇವೇ??? ಯಾಕೆ ನಾವು ನಮ್ಮ ಪೂರ್ವಜರಿಗೆ ಆಹಾರ ಅರ್ಪಿಸುವದಕ್ಕೆ ಕಾಗೆಗಳನ್ನೇ ಮಾದ್ಯಮವಾಗಿಸಿದ್ದೇವೇ?

ಈ ಕೆಳಗಿನ ಕಾರಣಗಳಿಗಾಗಿ ಕಾಗೆ ಒಂದು ಅದ್ಭುತವಾದ ಪಕ್ಷಿ ಎನ್ನಬಹುದು

  1. ಕಾಗೆಗಳು ಪ್ರತಿದಿನ ಬೆಳಿಗ್ಗೆ ಬ್ರಹ್ಮ ಮಹೂರ್ತದಲ್ಲಿ ಎದ್ದೇಳುವಂತಹ ಪಕ್ಷಿ. ಕೋಳಿಗಳು ಅಥವಾ ಹುಂಜಗಳು ಬೆಳಿಗ್ಗೆ ಏಳುವದು ತಪ್ಪಬಹುದು ಆದರೆ ಕಾಗೆಗಳು ಮಾತ್ರ ತಪ್ಪುವುದಿಲ್ಲ.
  2. ಒಂದು ಕಾಗೆಗೆ ತಿನ್ನಲು ಏನಾದರೂ ಆಹಾರ ಕಂಡರೆ ಅದು ಕಾವ್ ಕಾವ್ ಎಂದು ಕೂಗಿ ಇತರ ಕಾಗೆಗಳ ಜೊತೆ ಆಹಾರವನ್ನು ಹಂಚಿಕೊಳ್ಳಲು ಕರೆಯುತ್ತದೆ ( ಇತರ ಯಾವುದೇ ಪಕ್ಷಿ ಅಥವಾ ಪ್ರಾಣಿ ಈ ತರಹದ ವಿಶೇಷ್ ಲಕ್ಷಣಗಳನ್ನು ಹೊಂದಿಲ್ಲ)
  3. ಕಾಗೆಗಳು ಯಾವತ್ತು ಸೂರ್ಯಾಸ್ತದ ನಂತರ ಆಹಾರವನ್ನು ಸೇವಿಸುವದಿಲ್ಲ ಇದನ್ನೇ ನಮ್ಮ ಶಾಸ್ತ್ರಗಳು, ವೇದ ಉಪನಿಷತ್ತುಗಳು ಹೇಳುವುದು.

ಮೇಲೆ ತಿಳಿಸಿದ ಮೂರು ಗುಣಧರ್ಮಗಳನ್ನೇ ನಮ್ಮ ಪೂರ್ವಜರು ನಮಗೆ ಹೇಳುತ್ತಿದ್ದರು.

ಏಕೆ ಮಹಾಲಯ/ ಪಿತೃ ಪಕ್ಷದ ಸಮಯದಲ್ಲೇ ನಾವು ಕಾಗೆಗಳಿಗೆ ಆಹಾರವನ್ನು ನೀಡುವುದು.

ಏಕೆಂದರೆ ಇದೇ ತಿಂಗಳಿನಲ್ಲಿ ಕಾಗೆಗಳು ತಮ್ಮ ಸಂಗಾತಿಯೊಂದಿಗೆ ಕೂಡುತ್ತವೆ ಮತ್ತು ಸಂತತಿಯನ್ನು ಬೆಳೆಸುತ್ತವೆ.

ನಮ್ಮ ನಾಗರಿಕತೆ ಕಾಗೆಗಳ ಸಂತತಿಯನ್ನು ವೃದ್ಧಿಯಾಗಲೆಂದು ಬಯಸುತ್ತಿತ್ತು.

ನಮ್ಮ ಸುತ್ತಲೂ ಪರಿಸರದಲ್ಲಿ ಅಶ್ವಥ ವೃಕ್ಷಗಳ ಮತ್ತು ಆಲದ ಮರಗಳ ಸಂಖ್ಯೆ ಬೆಳೆಯಲೆಂದು!

ಕಾಗೆಗಳಿಗೂ ಮತ್ತು ಅಶ್ವಥ ವೃಕ್ಷಗಳ ಮತ್ತು ಆಲದ ಮರಗಳಿಗೂ ಏನು ಸಂಭಂಧ?

ಕೇವಲ ಕಾಗೆಯ ಅನ್ನ ನಾಳದಿಂದ ಹೊರಗೆ ಬಂದು ಭೂಮಿಗೆ ಬಿದ್ದ ಅಶ್ವಥ ವೃಕ್ಷ ಮತ್ತು ಆಲದ ಮರಗಳ ಬೀಜಗಳು ಮಾತ್ರ ಮೊಳಕೆಯೊಡೆಯುವುದು ಹೊರತು ಬೇರೆ ಯಾವುದರಿಂದಲೂ ಇದು ಆಗುವುದಿಲ್ಲ .

ಆದರೂ ಏಕೆ ನಮಗೆ ಅಶ್ವಥಮರ ಮತ್ತು ಆಲದಮರ ಹೆಚ್ಚು ಹೆಚ್ಚು ಬೇಕು????

ಏಕೆಂದರೆ ಬೇರೆ ಯಾವುದೇ ಮರಗಳಿಂದ ಸಿಗದೆ ಇರುವಷ್ಟು ಆಮ್ಲಜನಕ ಅಂದರೆ 24 X 7 ಪೂರ್ತಿ ಆಮ್ಲಜನಕ ಕೊಡುತ್ತವೆ ಅದಕ್ಕೆ ಇವುಗಳಿಗೆ ಆಮ್ಲಜನಕದ ಮರಗಳು ಅಂತ ಕರೆಸಿಕೊಳ್ಳುತ್ತವೆ 👍👍

ಆದ್ದರಿಂದ ಮುಂದಿನ ಸಲ ಯಾರಾದರೂ ನಿಮ್ಮನ್ನು ಇದು ಮೂಢನಂಬಿಕೇ ಎಂದು ಹೀಯಾಳಿಸಿದರೆ ಈ ಮೇಲೆ ತಿಳಿಸಿದ ಅಂಶಗಳನ್ನು ತಿಳಿಸಿ ಮತ್ತು ನಮ್ಮ ಸನಾತನ ಧರ್ಮದ ಆಚರಣೆಯ ವೈಜ್ಞಾನಿಕ ಸತ್ಯವನ್ನು ತಿಳಿಸಿ.

Related Articles

Latest Articles