Wednesday, February 19, 2025

ಬಾಹ್ಯಾಕಾಶದಿಂದ ಮಹಾ ಕುಂಭಮೇಳ ಹೇಗೆ ಕಾಣಿಸುತ್ತೆ? ಫೊಟೋ ಬಿಡುಗಡೆ ಮಾಡಿದ ಇಸ್ರೋ

ಬಾಹ್ಯಾಕಾಶದಿಂದ ಕಾಣಿಸುವ ಮಹಾ ಕುಂಭಮೇಳದ ಸ್ಥಳದ ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿದೆ.

ಭಾರತದ ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳು ಮತ್ತು ಹಗಲು ರಾತ್ರಿ ವೀಕ್ಷಿಸುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್ ಬಳಸಿ ಈ ಫೋಟೋಗಳನ್ನು ತೆಗೆಯಲಾಗಿದೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಮಹಾ ಕುಂಭಮೇಳದ ಚಿತ್ರಗಳ ಸರಣಿಯನ್ನು ಉಪಗ್ರಹದಿಂದ ರಿಸೀವ್‌ ಮಾಡಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್, ಪ್ರಯಾಗ್‌ರಾಜ್ (Prayagraj) ಮೇಲೆ ಆವರಿಸಿರುವ ಕ್ಲೌಡ್ ಬ್ಯಾಂಡ್ ಮೂಲಕ ಪ್ರದೇಶವನ್ನು ಚಿತ್ರಿಸಲು ಸಾಧ್ಯವಾಗುವಂತೆ ರಾಡಾರ್‌ಸ್ಯಾಟ್‌ನ್ನು ಬಳಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಮೇಳದಲ್ಲಿ ವಿಪತ್ತು ಮತ್ತು ಕಾಲ್ತುಳಿತಗಳನ್ನು ತಗ್ಗಿಸಲು ಈ ಚಿತ್ರಗಳನ್ನು ಬಳಸುತ್ತಿದೆ.

ಈ ಬಾರಿ ಉಪಗ್ರಹ ತೆಗೆದ ಚಿತ್ರಗಳಲ್ಲಿ ಹೊಸ ಶಿವಾಲಯ, ಉದ್ಯಾನವನ ಸೆರೆಯಾಗಿದೆ. ಇನ್ನೂ 2024ರ ಏ.6ರ ಚಿತ್ರವು ಸ್ಪಷ್ಟವಾದ ಮೈದಾನವನ್ನು ತೋರಿಸುತ್ತದೆ. ಈ ವರ್ಷ ಡಿಸೆಂಬರ್‌ನಲ್ಲಿ ತೆಗೆದ ಚಿತ್ರದಲ್ಲಿ ಮಹಾ ಕುಂಭಮೇಳದ ಸಿದ್ಧತೆಗಳನ್ನು ನೋಡಬಹುದಾಗಿದೆ..

Related Articles

Latest Articles