Saturday, January 25, 2025

ಭಾರತದ 13 ನಗರಗಳಲ್ಲಿ ಮಾತ್ರ ಶುದ್ಧಗಾಳಿ: ಕರ್ನಾಟಕದ ಏಳು ನಗರಗಳೂ ಸೇರಿವೆ..!!

ದೇಶದ ನಾನ ಪಟ್ಟಣಗಳ್ಲಿ ಗಾಳಿಯ ಗುಣಮಟ್ಟವು ಕ್ಷೀಣಿಸುತ್ತಿದೆ. ಹೀಗಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಶುದ್ಧ ಗಾಳಿ ಸಿಗುವ ನಗರಗಳು ಯಾವುವು ಎಂಬ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ ಪರಿಶುದ್ಧ ಗಾಳಿ ಸಿಗುವ ದೇಶದ 13 ನಗರಗಳ ಪೈಕಿ ನಮ್ಮ ರಾಜ್ಯದ 7 ನಗರಗಳಿಗೆ ಸ್ಥಾನ ದೊರಕಿದೆ. ಅವುಗಳು ಯಾವುವು?

ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳು ವಾಯು ಮಾಲಿನ್ಯದಿಂದ ನಡುಗಿ ಹೋಗಿವೆ. ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟವು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕರ್ನಾಟಕದ 7 ನಗರಗಳು ಶುದ್ಧ ಗಾಳಿ ಸಿಗುವ ನಗರಗಳೆಂಬ ಸ್ಥಾನವನ್ನು ಪಡೆದುಕೊಂಡಿದೆ.

ಗಾರ್ಡನ್‌ ಸಿಟಿ ಬೆಂಗಳೂರಿಗೆ ಈ ಪೈಕಿ ಸ್ಥಾನ ಸಿಗದಿದ್ದರೂ ಕರ್ನಾಟಕದ ಚಾಮರಾಜನಗರ, ಬಾಗಲಕೋಟೆ, ಹಾವೇರಿ, ಕೋಲಾರ, ಮಡಿಕೇರಿ, ಮಂಗಳೂರು ಮತ್ತು ವಿಜಯಪುರ ಈ ಏಳು ನಗರಗಳು ಶುದ್ಧ ಗಾಳಿ ಹೊಂದಿರುವ ನಗರಗಳೆಂಬ ಬಿರುದನ್ನು ಪಡೆದುಕೊಂಡಿದೆ.

Related Articles

Latest Articles