Saturday, June 22, 2024

ದಕ್ಷಿಣ ಕನ್ನಡ: ನಿಗೂಢ ಕೆಲಸಕ್ಕಾಗಿ 42 ಸಿಮ್‌ ಖರೀದಿಸಿದ್ದ ಯುವಕರ ತಂಡ ಪೊಲೀಸ್ ವಶಕ್ಕೆ

ನಿಗೂಢ ಕೆಲಸಕ್ಕಾಗಿ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವೊಂದು ಸೆರೆಯಾಗಿದೆ. ಅನುಮಾನಾಸ್ಪ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಂಗ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಿಮ್​ಗಳ ಸಾಗಾಟ ಬಯಲಿಗೆ ಬಂದಿದೆ.

ಐವರಿದ್ದ ಯುವಕರ ತಂಡ 42 ಅಕ್ರಮ ಸಿಮ್​ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾ| ಧರ್ಮಸ್ಥಳ ಪೊಲೀಸರ ಬಲೆಗೆ ಬಿದ್ದಿದೆ .

ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್​ಗಳನ್ನು ಜಪ್ತಿ ಮಾಡಲಾಗಿದೆ. ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಸಿಲುಕಿದ್ದಾನೆ.

ಆರೋಪಿ ಅಕ್ಬರ್​ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್​ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Related Articles

Latest Articles