Wednesday, February 19, 2025

ಪುಟ್ಟ ಪುಟ್ಟ ವಸ್ತುಗಳಲ್ಲಿ ಕಲಾಕೃತಿ ಅರಳಿಸುವ ಕಲಾಕಾರ ವೆಂಕಟೇಶ್ ಆಚಾರ್ಯ

ಬರಿಗಣ್ಣಿಗೆ ಕಾಣಿಸಲ್ಲ.‌ ಆದರೆ ಸೂಕ್ಷ್ಮವಾಗಿ ನೋಡಿದರೆ ಅದರಲ್ಲೊಂದು ಸುಂದರ ಕಲಾಕೃತಿ.. ಅಕ್ಕಿಕಾಳು, ಚಿನ್ನ, ಪೆನ್ಸಿಲ್, ಬೆಂಕಿ ಕಡ್ಡಿ, ಹೀಗೆ ಅನೇಕ ಚಿಕ್ಕ ಪುಟ್ಟ ವಸ್ತುಗಳನ್ನೇ ಬಳಸಿಕೊಂಡು ಕಲಾಕೃತಿ ರಚಿಸಲಾಗಿದೆ. ಇವರ ಈ ಮನಮೋಹಕ ಮೈಕ್ರೋ ಆರ್ಟ್‌ಗೆ ಪ್ರತಿಯೊಬ್ಬರೂ ಮೆಚ್ಚುಗೆ ಸೂಚಿಸಿದ್ದಾರೆ.

‘ಅಸಾಧ್ಯವಾಗದ ವಿಭಿನ್ನ ರೀತಿಯಲ್ಲಿ ಒಂದು ಅಕ್ಕಿಕಾಳಿನ ಗಾತ್ರದ ವಸ್ತುವಿನಿಂದ ಪ್ರಾರಂಭಗೊಂಡು ಬೇರೆ ಬೇರೆ ಪರಿಕರಗಳನ್ನು ಉಪಯೋಗಿಸಿ ಕಲೆಯಿಂದ ಏನಾದರೂ ಸಾಧಿಸಿ ಸಮಾಜಕ್ಕೆ ಅರ್ಪಿಸಬೇಕು ಎಂದು ಕನಸು ಹೊತ್ತು ಸಾಗುತ್ತಿರುವ ಸೂಕ್ಷ್ಮ ವಸ್ತುಗಳ ಮೈಕ್ರೋ ಆರ್ಟಿಸ್ಟ್ ಎಂದೇ ಚಿರಪರಚಿತರಾಗಿರುವವರು ವೆಂಕಟೇಶ್ ಆಚಾರ್ಯ.

ಇವರು ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯ
ಮುಳ್ಳೇರಿಯಾ ಸಮೀಪದ ತಲೆಬೈಲು ನಿವಾಸಿ ಸುಬ್ರಾಯ ಆಚಾರ್ಯ-ಶಾರದಾ ದಂಪತಿಯ ಪುತ್ರ ಸೂಕ್ಷ್ಮಾತಿ ಸೂಕ್ಷ್ಮ ವಸ್ತುಗಳಿಂದ ಇಂದು ಎಲ್ಲೆಡೆ ಮಾತಾಗಿರುವ ಕಲಾವಿದ ವೆಂಕಟೇಶ್.

2015 ರಲ್ಲಿ ಹಿಂದೂಸ್ತಾನ್ ವಾಟ್ಸಾಪ್ ಗ್ರೂಪ್‌ನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು, ತಾನು ಮಧ್ಯಮ ವರ್ಗದಲ್ಲಿದ್ದರು ಇನ್ನೊಬ್ಬರ ಸಹಾಯಕ್ಕೆ ಮಿಡಿಯುವ ಹೃದಯ ಇವರದ್ದು ಪ್ರಸ್ತುತ ಇವರು ಅಕ್ಕಸಾಲಿಗ ಕೆಲಸದಲ್ಲಿ ತೊಡಗಿದ್ದಾರೆ.

ಬಾಲ್ಯದಲ್ಲಿಯೇ ಕಲೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ಈ ಕಲಾವಿದ ದೇಶದೆಲ್ಲೆಡೆ ಸದ್ದಿಲ್ಲದೆ ಸಾಧನೆ ಮಾಡುತ್ತಿರುವ ಗಡಿನಾಡ ಪ್ರತಿಭೆ ವೆಂಕಟೇಶ್.


ಸಾಮಾನ್ಯ ವ್ಯಕ್ತಿಯನ್ನು ದಿಗ್ಗಜರು ಗುರುತಿಸಿ ಹರಸುವುದೆಂದರೆ ಅಂತಿತ ಸಾಧನೆಯಲ್ಲ ಒಬ್ಬ ಸಾಧಕನಿಗೆ ಆತನ ನಲ್ಲಿರುವ ಕಲೆಗೆ ಬೆಲೆ ಬರುವುದು ಇನ್ನೊಬ್ಬರ ಪ್ರಶಂಸನೆ, ಇನ್ನೊಬ್ಬರ ಹಾರೈಕೆಯಿಂದ ಕಲಾ ಎದರು ಯಾರು ತನಗೆ ಪ್ರಶಸ್ತಿಗಳು ದೊರೆಯಬೇಕು ಎಂದು ಬಯಸುವವರಲ್ಲ ಬದಲಿಗೆ ತಮ್ಮ ಕಲೆಯನ್ನು ಇನ್ನೊಬ್ಬರು ಮೆಚ್ಚುವಂತೆ ಮಾಡಿ ನೋಡುಗೆದ ಪ್ರಶಂಸೆಗೆ ಪಾತ್ರರಾದರೆ ಅದೇ ಅವರಿಗೆ ದೊರಕುವ ಬಹುದೊಡ್ಡ ಪ್ರಶಸ್ತಿ ಅಂತಹವರ ಸಾಲಿನಲ್ಲಿ ವೆಂಕಟೇಶ್ ಕೂಡ ಒಬ್ಬರು.


ಈ ಕಲಾವಿದನ ಕಲೆ ಸಾಮಾನ್ಯವಾಗಿದ್ದು ಅಲ್ಲ. ವೆಂಕಟೇಶ್‌ರ ಸಾಧನೆಗೆ ಕಲಾ ಮಾತೆ ಇನ್ನಷ್ಟು ಶಕ್ತಿ ನೀಡಲಿ. ಊರು ಪರವೂರುಗಳಿಂದ ಇವರ ಕಲೆಯನ್ನು ಮೆಚ್ಚಿ ಬೇಡಿಕೆ ಹೆಚ್ಚಾಗಲಿ. ಯಾಕೆಂದರೆ ಈ ಕಲಾವಿದ ಸಮಾಜ ಸೇವಕ, ಅಲ್ಲಿ ಬಂದ ಅಲ್ಪ ಪ್ರಮಾಣದಿಂದ ಇನ್ನೊಬ್ಬರಿಗೆ ಸಹಾಯ ಮಾಡುವ ವಿಶಾಲ ಮನಸ್ಸು ಇವರದ್ದು ಹಾಗಾಗಿ ಈ ಕಲಾವಿದನ ಕಲೆ ಇನ್ನೂ ಎತ್ತರೆತ್ತರಕ್ಕೇರಲಿ ಎಂದು ಆಶಿಸೋಣ.

✍️ದೀಪ್ತಿ ಅಡ್ಡಂತ್ತಡ್ಕ

ಪತ್ರಿಕೋದ್ಯಮ ವಿದ್ಯಾರ್ಥಿನಿ,

ವಿವೇಕಾನಂದ” ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

Related Articles

Latest Articles