Tuesday, July 23, 2024

ಸೀತೆ ಕೈಯಲ್ಲಿ ಸಿಗರೇಟ್.! ಹಿಂದೂಗಳ ಭಾವನೆಗೆ ಧಕ್ಕೆ – ಪ್ರೊಫೆಸರ್ ಸೇರಿ ವಿದ್ಯಾರ್ಥಿಗಳು ಅರೆಸ್ಟ್

ಮುಂಬೈ: ರಾಮಾಯಣದ ಕುರಿತ ನಾಟಕ ಪ್ರದರ್ಶನದ ವೇಳೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ರಾಮಾಯಣದ ಕುರಿತ ನಾಟಕ ಪ್ರದರ್ಶನವಾಗಿತ್ತು. ಈ ವೇಳೆ ಸೀತೆಯ ಪಾತ್ರಧಾರಿಯು ಧೂಮಪಾನ ಮಾಡುವುದು ಸೇರಿ ಹಲವು ಆಕ್ಷೇಪಾರ್ಹ ದೃಶ್ಯಗಳು ಜೊತೆಗೆ ಪಾತ್ರಾಧಾರಿಗಳು ನಿಂದನೀಯ ಭಾಷೆಗಳನ್ನು ಬಳಸಿದ್ದಾರೆ.

ಘಟನೆಗೆ ಸಂಬಂಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಿಂದು ದೇವತೆಗಳಿಗೆ ನಾಟಕದ ಹೆಸರಿನಲ್ಲಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ವಿವಿ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಎಬಿವಿಪಿ ಪುಣೆ ನಗರ ಅಧ್ಯಕ್ಷ ಹರ್ಷವರ್ಧನ್‌ ಹರ್ಪುಡೆ ಅವರು ಚತುರ್‌ಶ್ರಿಂಗಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ವಿವಿಯ ಸೆಂಟರ್‌ ಫಾರ್‌ ಪರ್ಫಾಮಿಂಗ್‌ ಆರ್ಟ್ಸ್‌ ವಿಭಾಗದ ನಿರ್ದೇಶಕ ಡಾ. ಪ್ರವೀಣ್‌ ಭೋಲೆ, ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು, ಬರಹಗಾರ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ.

Related Articles

Latest Articles