Tuesday, June 25, 2024

ಯುವ ನ್ಯಾಯವಾದಿ, ಪತ್ರಕರ್ತ ವೇಣುಗೋಪಾಲ್‌ ಹೃದಯಾಘಾತಕ್ಕೆ ಬಲಿ..!

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಜಯಕಿರಣ ಪತ್ರಿಕೆಯ ತಾಲೂಕು ವರದಿಗಾರ ಹಾಗೂ ಯುವ ನ್ಯಾಯವಾದಿ ವೇಣುಗೋಪಾಲ (30) ಸೋಮವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಸಚ್ಚೇರಿಪೇಟೆಯ ಆನಂದ ಪೂಜಾರಿ ಅವರ ಪುತ್ರರಾಗಿರುವ ವೇಣುಗೋಪಾಲ ಅವರು ಅವಿವಾಹಿತರಾಗಿದ್ದಾರೆ.

ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ಮೂಡುಬಿದಿರೆಯಲ್ಲಿ ಯುವ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು.

ಪತ್ರಿಕಾ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ವೇಣುಗೋಪಾಲ ಅವರು ಭಾನುವಾರ ಸಂಜೆ ತನ್ನ ಸಹೋದರಿಯ ಮನೆಗೆ ಹೋಗಿದ್ದರು.

ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ವೇಣು ಗೋಪಾಲ್ ನಿಧನಕ್ಕೆ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ, ಅನೇಕ ಹಿರಿಯ ಕಿರಿಯ ಪತ್ರಕರ್ತರು ಹಾಗೂ ಮೂಡುಬಿದಿರೆ ವಕೀಲರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Related Articles

Latest Articles