Tuesday, March 18, 2025

ಗಂಡನ ವಿಚಿತ್ರ ಬುದ್ದಿ..! ವರದಿ‌ ಒಪ್ಪಿಸುತ್ತಿದ್ದ ಪತಿರಾಯನ ಮೇಲೆ ಬಿತ್ತು ಎಫ್ಐಆರ್

ಗಂಡನ ವಿಚಿತ್ರ ನಡವಳಿಕೆಯಿಂದ ನೊಂದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಗಂಡನ ವಿಚಿತ್ರ ನಡವಳಿಕೆಯ ಬಗ್ಗೆ ಪತ್ನೊ ನೀಡಿದ ದೂರಿನಂತೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2007ರಲ್ಲಿ ಮಹಿಳೆಗೆ ಮಂಗಳೂರು ಮೂಲದ ಸುಧೀರ್ ಪೈ ಎಂಬಾತನ ಜೊತೆಯಲ್ಲಿ ಮದುವೆಯಾಗಿತ್ತು.

ದಂಪತಿಗೆ 11 ಮತ್ತು 10 ವರ್ಷದ ಎರಡು ಮಕ್ಕಳು ಇವೆ. ಪತಿ ಸಣ್ಣಪುಟ್ಟ ವಿಷಯಕ್ಕೂ ಕಿರಿಕಿರಿ ಮಾಡಿ ಹಲ್ಲೆ ನಡೆಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ಬಾರಿ ಮಕ್ಕಳು ತನ್ನ ಪತಿಯ ಮೊಬೈಲ್ ತೆಗೆದುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಮಹಿಳೆ ಗಂಡನ ಮೊಬೈಲ್ ಚೆಕ್ ಮಾಡಿದಾಗ ಪತಿಯ ಕರಾಳ ಮುಖ ಬಯಲಾಗಿದೆ. ಗಂಡನ ಫೋನ್ ನೋಡಿದಾಗ ಆತ ತನ್ನ ಮೂವರು ಗೆಳೆಯರೊಂಗೆ ಪತ್ನಿ ಜೊತೆಗಿನ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಚಾಟ್ ನಡೆಸಿರುವುದು ಬಹಿರಂಗವಾಗಿದೆ.

ಈ ಬಗ್ಗೆ ಮಹಿಳೆ ಗಂಡನನ್ನು ಪ್ರಶ್ನಿಸಿದಾಗ, ಅದು ನನ್ನ ಇಷ್ಟ, ನಾನು ಏನಾದ್ರೂ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಯಾರಿಗಾದ್ರೂ ಹೇಳಿದ್ರೆ ಸಾಯಿಸಿ ಬಿಡುತ್ತೇನೆ ಎಂದು ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ.

ಅಷ್ಟೆ ಅಲ್ಲದೇ ತನ್ನ ಸ್ನೇಹಿತರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒತ್ತಡ ಹೇರಿದ್ದಾನೆ. ಈ ಕುರಿತು ಗಂಡನಿಗೆ ಸರಿಯಾಗಿ ತಿಳಿ ಹೇಳಿದರೂ ಅವರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದರಿಂದ ಮಕ್ಕಳನ್ನು ಕರೆದುಕೊಂಡು ನಾನು ತವರು ಮನೆ ಸೇರಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Related Articles

Latest Articles