Wednesday, July 16, 2025

ಫೆ.25ರಂದು ಯಕ್ಷಗಾನ ಅಂಚೆಚೀಟಿ ಬಿಡುಗಡೆ

ಭಾರತೀಯ ಅಂಚೆ ಇಲಾಖೆ ಯಕ್ಷಗಾನದ ಅಂಚೆಚೀಟಿಯನ್ನು ಹೊರತಂದಿದ್ದು ಬಿಡುಗಡೆ ಸಮಾರಂಭ ಇದೇ 25ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ನಗರದ ಎಂಆರ್‌ಪಿಎಲ್ ಸಹಯೋಗದಲ್ಲಿ ಅಂಚೆಚೀಟಿ ಸಿದ್ಧಗೊಳಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಂಚೆ ಇಲಾಖೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್‌.ರಾಜೇಂದ್ರ ಕುಮಾರ್ ಅಂಚೆಚೀಟಿ ಬಿಡುಗಡೆ ಮಾಡುವರು ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯಕರ್ತ ಸರಪಾಡಿ ಅಶೋಕ್ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Related Articles

Latest Articles