ಚಂದನವನದ ಸ್ಟಾರ್ ನಟ ಕಿಚ್ಚ ಸುದೀಪ ಎಲ್ಲರಿಗೂ ಅಚ್ಚುಮೆಚ್ಚು ಸದಾ ಆಕ್ಟೀವ್ ಇದ್ದರೂ ತುಂಬಾನೆ ಬ್ಯುಸಿ ಕೂಡ ಇರ್ತಾರೆ. ಸಿನಿಮಾಗಳ ಮಧ್ಯೆ ಬಿಗ್ ಬಾಸ್ ನಡೆಸಿಕೊಟ್ಟದ್ದು ಗೊತ್ತೇ ಇದೆ. ಪರ ಭಾಷೆಯ ಸಿನಿಮಾಗಳನ್ನ ಈ ಸಲ ಇನ್ನು ಯಾಕೋ ಒಪ್ಪಿಲ್ಲ ನೋಡಿ. ಆದರೆ ಇದೀಗ ಸುದೀಪ್ ಒಂದು ಪ್ರಚಲಿತ ಕಂಪನಿಯ ರಾಯಭಾರಿ ಆಗಿದ್ದಾರೆ.
ಸುದೀಪ್ ಕಂಚಿನ ಕಂಠದಿಂದ ಇನ್ಮುಂದೆ ಆ ಕಂಪನಿ ಹಣಕಾಸಿನ ವ್ಯವಹಾರಗಳ ಕಂಪ್ಲೀಟ್ ಡಿಟೈಲ್ಸ್ ದೊರೆಯುತ್ತದೆ. ಹೌದು, ಕಿಚ್ಚ ಸುದೀಪ್ ಧ್ವನಿ ಇನ್ಮೇಲೆ ಫೋನ್ ಪೇ ಸ್ಪೀಕರ್‌ಗಳಲ್ಲಿ ಕೇಳಿ ಬರಲಿದೆ. ಇಲ್ಲಿವರೆಗೂ ಅದ್ಯಾರದೋ ವಾಯ್ಸ್ ಬರ್ತಾ ಇತ್ತು. ಆದರೆ ಶೀಘ್ರದಲ್ಲಿಯೇ ಕಿಚ್ಚನ ವಾಯ್ಸ್ ಕೇಳಿ ಬರಲಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ .
ಫೋನ್ ಪೇ ಸ್ಪೀಕರ್‌ನಲ್ಲಿ ಕಿಚ್ಚ ಸುದೀಪ್ ಕಂಚಿನ ಕಂಠದ ಧ್ವನಿ!
ಕಿಚ್ಚ ಸುದೀಪ್ ಜೊತೆಗೆ ಫೋನ್ ಪೇ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕಿಚ್ಚನ ವಾಯ್ಸ್ ಸ್ಯಾಂಪಲ್ ತೆಗೆದುಕೊಂಡು ಹೋಗಲಾಗಿದೆ. ‘ಒಂದು ರೂಪಾಯಿ ಫೋನ್ ಪೇ ಸ್ವೀಕರಿಸಲಾಗಿದೆ ಧನ್ಯವಾದಗಳು’ ಅನ್ನೋ ಸಾಲನ್ನ ಕಿಚ್ಚನಿಂದ ಹೇಳಿಸಲಾಗಿದೆ.
ಹೀಗೆ ಕಿಚ್ಚನ ವಾಯ್ಸ್ ಇನ್ಮುಂದೆ ಫೋನ್ ಪೇ ಮೂಲಕ ಯಾರೇ ದುಡ್ಡು ಹಾಕಿದರೂ ಸರಿಯೇ? ಕಿಚ್ಚನ ಧ್ವನಿಯಲ್ಲಿಯೇ ಅದು ಕೇಳಿ ಬರಲಿದೆ. ಆದರೆ ಇದು ಯಾವಾಗಿನಿಂದ ಅನ್ನೋ ಮಾಹಿತಿ ಇನ್ನು ಹೊರ ಬಂದಿಲ್ಲ ನೋಡಿ.