ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಬರೋಬ್ಬರಿ 75 ಲಕ್ಷ ರೂ ಮೌಲ್ಯದ ವಜ್ರದುಂಗುರ ಕಳವು ಮಾಡಿದ ಘಟನೆ ನಡೆದಿದೆ. ನಗರದ ಎಂ.ಜಿ.ರಸ್ತೆಯ ಜೋಯಲುಕ್ಕಾಸ್ ಆಭರಣ ಮಳಿಗೆಯಲ್ಲಿ ಘಟನೆ ನಡೆದಿದೆ.
ಫೆಬ್ರವರಿ 18ರಂದು ಸಂಜೆ ವೇಳೆ ಗ್ರಾಹಕನ ಸೋಗಿನಲ್ಲಿ ಜೋಯಲುಕ್ಕಾಸ್ ಶಾಪ್ಗೆ ವ್ಯಕ್ತಿ ಎಂಟ್ರಿ ಕೊಟ್ಟಿದ್ದಾನೆ. ಆಭರಣ ನೋಡುವ ನೆಪದಲ್ಲಿ ಸಿಬ್ಬಂದಿಗೆ ತಿಳಿಯದಂತೆ ನಕಲಿ ಉಂಗುರ ಇರಿಸಿ ಅಸಲಿ ವಜ್ರದ ಉಂಗುರ ಎಗರಿಸಿದ್ದಾನೆ. ಬಳಿಕ ನಕಲಿ ಆಭರಣ ಅಲ್ಲೇ ಇಟ್ಟು ನಿಧಾನವಾಗಿ ಎದ್ದು ತೆರಳಿದ್ದಾನೆ.
ಮರುದಿನ ಮ್ಯಾನೇಜರ್, ಶಿಬಿನ್ ವಿಎಂ ಆಭರಣಗಳನ್ನು ಪರಿಶೀಲಿಸುವಾಗ ನಕಲಿ ಉಂಗುರ ಪತ್ತೆಯಾಗಿದೆ. ಕೂಡಲೇ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಆರೋಪಿಯ ಕಳ್ಳತನದ ಕೃತ್ಯ ಬಯಲಾಗಿದೆ. ಕೂಡಲೇ ಶಾಪ್ ಸಿಬ್ಬಂದಿ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾದ ಆರೋಪಿಗಾಗಿ ಬಲೆ ಬೀಸಿದ್ದಾರೆ.