Monday, October 14, 2024

25ನೇ ವಯಸ್ಸಿಗೆ ಅಪ್ರತಿಮ ಸಾಧನೆ: ಬಂಟ್ವಾಳದ ಅನಿಲ್ ಸಿಕ್ವೇರಾ ಕರ್ನಾಟಕದ ಅತ್ಯಂತ ಕಿರಿಯ ನ್ಯಾಯಾಧೀಶ!

ಮಂಗಳೂರು: ಕರ್ನಾಟಕ ನ್ಯಾಯಾಂಗ ಇತಿಹಾಸದಲ್ಲಿ ಅತೀ ಚಿಕ್ಕ ವಯಸ್ಸಿನ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಕರಾವಳಿ ಜಿಲ್ಲೆಯ ಬಂಟ್ವಾಳದ ಯುವಕ ಪಾತ್ರನಾಗಿದ್ದಾನೆ. ದ ಅನಿಲ್ ಜಾನ್ ಸಿಕ್ವೇರಾ 25ನೇ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ರಾಜ್ಯದಲ್ಲಿ ಕಿರಿಯ ಸಿವಿಲ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಲಿರುವ ಅನಿಲ್ ಜಾನ್ ಸಿಕ್ವೇರಾ, ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹೀಗೆ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಬಂಟ್ವಾಳ ತಾಲೂಕಿನ ಬರಿಮಾರಿನ ಅನಿಲ್ ಸಿಕ್ವೇರಾ ತಮ್ಮ ಪರಿಶ್ರಮದಿಂದ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆಗೆ ಅರ್ಹರಾಗಿದ್ದಾರೆ. ಕೃಷಿಕರಾದ ಎವರೆಸ್ಟ್ ಸಿಕ್ವೇರಾ ಮತ್ತು ಐವಿ ಸಿಕ್ವೇರಾ ದಂಪತಿಯ ಮೂವರು ಮಕ್ಕಳಲ್ಲಿ ಕಿರಿಯವರಾಗಿರುವ ಅನಿಲ್ ಚಿಕ್ಕಂದಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ.

25ರ ವಯಸ್ಸಿನಲ್ಲೇ ಎರಡನೇ ಪ್ರಯತ್ನದಲ್ಲಿಉತ್ತೀರ್ಣರಾದ ಅನಿಲ್ ಸಿಕ್ವೇರಾ ಕರ್ನಾಟಕದ ಸಿವಿಲ್ ನ್ಯಾಯಾಧೀಶರಾಗುವ ತನ್ನ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ. ಇನ್ನು ಕಳೆದ ವರ್ಷ 2023ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಯುವತಿ ವಿ.ಆರ್ ಅನುಷಾ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಜಡ್ಜ್ ಎಂಬ ಸಾಧನೆ ಬರೆದಿದ್ದರು. ಆದರೀಗ ಈ ದಾಖಲೆ ಅನಿಲ್ ಸಿಕ್ವೇರಾ ಅವರ ಪಾಲಾಗಿದೆ.

Related Articles

Latest Articles