ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ಕಾಮುಕನೊಬ್ಬ ಬೈಕ್ ನಿಲ್ಲಿಸಿ ಅನುಚಿತವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಬಸಿರ್ಹತ್ ಎಂಬಲ್ಲಿ ಈ ನಾಚಿಕೆಗೇಡಿನ ಕೃತ್ಯ ನಡೆದಿದೆ. ಘಟನೆಯ ಕುರಿತ ದೃಶ್ಯದ ಸಿಸಿಟಿವಿ ಫೂಟೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ವ್ಯಕ್ತಿ ಯುವತಿಯ ಎದುರೇ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಈತನ ಈ ಹೇಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಿರಾಜ್ (@sirajnoorani) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೆಣ್ಣು ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ಕೂಡಾ ಕಷ್ಟವಾಗಿಬಿಟ್ಟಿದೆ ನೋಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
SENSIBLE VIDEO 🔞🔞
ಈತನ ವರ್ತನೆಯಿಂದ ಭಯಭೀತಳಾದ ಯುವತಿ ಅಲ್ಲಿಂದ ಓಡಿ ಹೋಗಿದ್ದಾಳೆ. ಜೂನ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇಂತಹ ಕಾಮುಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.