ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಆಗಾಗ ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ ರಶ್ಮಿಕಾ. ಒಂದೊಮ್ಮೆ ತಮ್ಮ ನಡವಳಿಕೆ ಹಾಗೂ ಹೇಳಿಕೆ ಮೂಲಕ ಕನ್ನಡಿಗರ ಹೃದಯ ನೋಯಿಸಿದ ರಶ್ಮಿಕಾ ತನ್ನೆಲ್ಲಾ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಕನ್ನಡಿಗರಿಗೆ ಹತ್ತಿರ ಆಗಿದ್ದಾರೆ. ಹೀಗಾಗಿ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸಖತ್ ಸುದ್ದಿಯಲ್ಲಿರುತ್ತಾರೆ.
ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ತನ್ನ ಹುಟ್ಟೂರು ಕೊಡಗಿಗೆ ನಟಿ ಭೇಟಿ ನೀಡಿದ್ದಾರೆ. ಸ್ನೇಹಿತೆಯ ಮದುವೆಯಲ್ಲಿ ಸಮಾರಂಭದಲ್ಲಿ ರಾಯಲ್ ಬ್ಲೂ ಸೀರೆಯಲ್ಲಿ ಮಿರ ಮಿರ ಅಂತ ಮಿಂಚಿದ್ದಾರೆ.
ಸದ್ಯ ನಟಿ ಶೇರ್ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟಿ ಶೂಟಿಂಗ್ ಬ್ರೇಕ್ ಕೊಟ್ಟು ತನ್ನ ಗೆಳತಿಯ ಮದುವೆಗೆ ಹಾಜರಾಗಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ರಶ್ಮಿಕಾ ಮಂದಣ್ಣ ತಮ್ಮ ಅದ್ಭುತ ನಟನೆ ಮೂಲಕ ನ್ಯಾಶನಲ್ ಕ್ರಶ್ ಆಗಿ ಫೇಮಸ್ ಆಗಿದ್ದಾರೆ.
ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಂಡು ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ. ಇವತ್ತು ನನ್ನ ಹುಡುಗಿಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನೀವು, ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಮತ್ತು ಆರೋಗ್ಯದಿಂದ ಇರು ಎಂದು ಬಯಸುತ್ತೇನೆ ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋ ನೋಡಿದ ಫ್ಯಾನ್ಸ್ ಕಾಮೆಂಟ್ಸ್ ಮಾಡೋ ಮುನ್ನ ಎಚ್ಚರ, ನಮ್ಮ ಕೂರ್ಗ್ ಬೆಡಗಿ ಅಂತ ಕಾಮೆಂಟ್ ಮಾಡಿದ್ದಾರೆ.