ಚುನಾವಣೆಗೆ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಈಗಾಗಲೇ ಕೆಲಾವು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಈ ಚುನಾವಣೆ ಸಂದರ್ಭ ಪ್ರತಿಯೊಬ್ಬ ಭಾರತೀಯ ಪ್ರಜೆ ಮತದಾನ ಮಾಡಬೇಕೆಂಬ ಸಂದೇಶ ಸಾರಲು ಉತ್ತಮ ಹಾಗೂ ಬಲಿಷ್ಟ ಭಾರತಕ್ಕೆ ತಮ್ಮ ಮತ ಸಾಕ್ಷಿ ಆಗಲಿ ಎಂಬ ಉದ್ದೇಶದಿಂದ ಕಾಸರಗೋಡು ಜಿಲ್ಲೆಯ ಖ್ಯಾತ ಮೈಕ್ರೋ ಆರ್ಟಿಸ್ಟ್ ವೆಂಕಟೇಶ್ ಆಚಾರ್ಯ ಇವರು ಬೆಂಕಿಕಡ್ಡಿಯ ತುದಿಯ ಗಾತ್ರದಲ್ಲಿ ಭಾರತದ ಸಂವಿಧಾನ ಕಟ್ಟಡದ ಆಕೃತಿ ಮತ್ತು ತ್ರಿವರ್ಣ ಧ್ವಜ ಸೂಕ್ಷ್ಮ ರೀತಿಯಲ್ಲಿ ರಚಿಸಿ ಜಾಗೃತಿಯ ಮೂಲಕ ಗಮನ ಸೆಳೆದಿದ್ದಾರೆ.
ಮೈಕ್ರೋ ಆರ್ಟಿಸ್ಟ್ ಆಗಿರುವ ವೆಂಕಟೇಶ್ ಆಚಾರ್ಯ ಈಗಾಗಲೇ ತಮ್ಮ ವಿಭಿನ್ನ ಕಲಾಕೃತಿಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.