Monday, December 9, 2024

ಕಾಸರಗೋಡು; ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

ಕಾಸರಗೋಡು: ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಚೆಂಗಳ ತೈವಳಪ್ಪಿನ ಸಿ.ವಿ. ಅಬೂಬ ಕರ್- ಖದೀಜಾ ದಂಪತಿ ಪುತ್ರ ಸಿ.ವಿ. ಶಫೀಕ್ (22) ಸಾವನ್ನಪ್ಪಿದ ಯುವಕ.

2023 ಡಿಸೆಂಬರ್ 17ರಂದು ಎರ್ನಾಕುಳಂನಲ್ಲಿ ಅಪಘಾತ ನಡೆದಿತ್ತು. ಎರ್ನಾಕುಳಂನ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಶಫೀಕ್ ಕೆಲಸ ಮುಗಿಸಿ ಬೈಕ್ನಲ್ಲಿ ತನ್ನ ವಾಸಸ್ಥಳಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಆ ಬೈಗ್ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡು ಚಲನ ಶಕ್ತಿಯನ್ನೂ ಕಳೆದುಕೊಂಡಿದ್ದ ಶಫೀಕ್ರನ್ನು ಕಳೆದ ಮೂರು ತಿಂಗಳಿಂದ ಎರ್ನಾಕುಳಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಅವರನ್ನು ಅಲ್ಲಿಂದ ಕಾಸರಗೋಡಿಗೆ ತಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಇವರ ಇನ್ನೋರ್ವ ಸಹೋದರ ಮುಹಮ್ಮದ್ ನಿಯಾಸ್ ಈ ಹಿಂದೆ ನಿಧನ ಹೊಂದಿದ್ದರು.

Related Articles

Latest Articles