ಮುಳ್ಳೇರಿಯ: ಯುವ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
With input from Karaval
ನಾಟೆಕಲ್ಲು ಬಳಿಯ ಬೆಳ್ಳೂರಡ್ಕ ದಿ| ಶ್ರೀಧರ ಎಂಬವರ ಪುತ್ರ ಕೀರ್ತನ್ (27) ಮೃತಪಟ್ಟ ಯುವಕ. ಇವರು ಮುಳ್ಳೇರಿಯಾದಲ್ಲಿ ಕಾರು ವಾಷಿಂಗ್ ಹಾಗೂ ಸಿರಾಮಿಕ್ ಕೋಟಿಂಗ್ ಉದ್ಯೋಗ ನಡೆಸುತ್ತಿದ್ದರು. ನಿನ್ನೆ ಮಧ್ಯಾಹ್ನ ವೇಳೆ ಮನೆಯಲ್ಲಿದ್ದ ಕೀರ್ತನ್ ಬೆಡ್‌ರೂಂಗೆ ತೆರಳಿದ್ದು, ದೀರ್ಘ ಹೊತ್ತಾದರೂ ಹೊರಗೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸಹೋದರ ಬಾಗಿಲು ತೆರೆದು ನೋಡಿದಾಗ ಕೀರ್ತನ್ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಹಗ್ಗ ತುಂಡರಿಸಿ ಮುಳ್ಳೇರಿಯದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ದಾರಿ ಮಧ್ಯೆ ಸಾವು ಸಂಭವಿಸಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಬಳಿಕ ಸ್ವ- ಗೃಹಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ತಾಯಿ ಕುಸುಮ, ಸಹೋದರ ಕಿರಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.