ಬಿಜೆಪಿ ಪಕ್ಷದ ಸಭೆಗೆ ಹಾಜರಾಗಲು ತೆರಳಿದ್ದ ವೇಳೆ ಸಂಸದ ಡಾ. ಉಮೇಶ್ ಜಾಧವ್ ಲಿಫ್ಟ್ ನಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದಿದೆ.
ಡಾ. ಉಮೇಶ್ ಜಾಧವ್, ಕಲಬುರಗಿ ಲೋಕಸಭಾ ಸದಸ್ಯರಾಗಿದ್ದು, ನೆಲಮಹಡಿಯಿಂದ ಒಂದನೇ ಮಹಡಿಗೆ ಹೋಗುತ್ತಿದ್ದಾಗ ಲಿಫ್ಟ್ ಕೈಕೊಟ್ಟಿದೆ. 45 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಂಸದ ಜಾಧವ್ ಪರದಾಡಿದ್ದಾರೆ.
ಮಧ್ಯಾಹ್ನ 12.05 ನಿಮಿಷದಿಂದ 12.50 ರವರೆಗೆ ಲಿಫ್ಟ್‌ನಲ್ಲಿ MP ಜಾಧವ್ ಲಾಕ್ ಆಗಿದ್ದಾರೆ. ಇವರ ಜೊತೆಗೆ ನಾಲ್ವರು ಮುಖಂಡರು ಸಹ ಇದ್ದರು. ಕೊನೆಗೆ ಕಚೇರಿ ಸಿಬ್ಬಂದಿಗಳು ಲಿಫ್ಟ್‌ನಲ್ಲಿ ಸಿಲುಕಿರುವ ನಾಲ್ವರನ್ನ ಸುರಕ್ಷಿತವಾಗಿ ಹೊರತೆಗೆದ್ದಾರೆ. ತಾಂತ್ರಿಕ ದೋಷದಿಂದ ಲಿಫ್ಟ್ ಸ್ಟ್ರಕ್ ಆಗಿರೋದು ಬೆಳಕಿಗೆ ಬಂದಿದೆ.