Saturday, January 25, 2025

ಉಡುಪಿ: ಕೆಂಡ ಸೇವೆ ವೇಳೆ ಆಯತಪ್ಪಿ ಬೆಂಕಿಗೆ ಬಿದ್ದ ಅಯ್ಯಪ್ಪ ಮಾಲಾಧಾರಿ – ವಿಡಿಯೋ ವೈರಲ್

ಅಯ್ಯಪ್ಪ ಮಾಲಾಧಾರಿಯೊಬ್ಬರು ಕೆಂಡಸೇವೆ ವೇಳ ನಡೆಯಲು ಹೋಗಿ ಆಯತಪ್ಪಿ ಬೆಂಕಿಯ ಮೇಲೆ ಬಿದ್ದ ಘಟನೆ ಮಲ್ಪೆಯಲ್ಲಿ ನಡೆದಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ.

ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ವೇಳೆ ಅವಘಡ ನಡೆದಿದ್ದು ಕೆಂಡ ಹಾಯುವ ವೇಳೆ ಆಯ ತಪ್ಪಿ ಮಾಲಾಧಾರಿ ವ್ಯಕ್ತಿ ಬೆಂಕಿಗೆ ಬಿದ್ದಿದ್ದಾರೆ.‌ ಸ್ಥಳೀಯರ ಮೊಬೈಲ್ ನಲ್ಲಿ ವಿಡಿಯೋ ಸೆರೆಯಾಗಿದ್ದು ಆಯತಪ್ಪಿ ಬೀಳುತ್ತಿದ್ದಂತೆ ಜನ ಹೌಹಾರಿದ್ದಾರೆ.

ಕೂಡಲೇ ಇತರೇ ಮಾಲಾಧಾರಿಗಳು ಆ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬರಿ ಮೈಯಲ್ಲಿ ಕೆಂಡ ಹಾಯುತ್ತಿದ್ದಾಗ ಘಟನೆ ನಡೆದಿದ್ದರಿಂದ ಮೈಯಲ್ಲಿ ಸುಟ್ಟ ಗಾಯಗಳಾಗಿವೆ.

Related Articles

Latest Articles