ಹೊಸ ವರ್ಷದಲ್ಲಿ ಕೆಲವು ಔಷಧಗಳ ಬೆಲೆ ಇಳಿಕೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆರೋಗ್ಯ ಸಚಿವಾಲಯದ ಅನುಸಾರ, 19 ಹೊಸ ಔಷಧಿಗಳನ್ನು ದರ ಇಳಿಕೆ ಮಾಡಲಾಗಿದೆ. ಇದರಲ್ಲಿ ಸೋಂಕು, ಮೈಕೈ ನೋವು, ಜ್ವರ, ಗಂಟಲು ಸೋಂಕು, ಜಂತುಹುಳು ನಿವಾರಣೆ ಇತ್ಯಾದಿ ಔಷಧಿಗಳ ಬೆಲೆಯನ್ನು ನಿಯಂತ್ರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳು ಪ್ಯಾರಾಸೆಟಮಾಲ್, ಮೆಟ್‌ಫಾರ್ಮಿನ್ ಸಹಿತ ಸಹಿತ ಒಟ್ಟು 127 ಔಷಧಗಳು ಶೀಘ್ರವೇ ಕಡಿಮೆ ದರದಲ್ಲಿ ಸಿಗಲಿವೆ. ಪ್ರಸ್ತುತ ಪ್ಯಾರಾಸೆಟಮಾಲ್(650 ಎಂಜಿ) ಮಾತ್ರೆಯ ದರ 2.30 ರೂ. ಆಗಿದೆ.ಇದನ್ನು ಶೇ.25ರಷ್ಟು ಇಳಿಕೆ ಮಾಡಲಾಗಿದ್ದು, ಹೀಗಾಗಿ, 1.80 ರೂ.ಗೆ ಸಿಗಲಿದೆ. ಅಮೋಕ್ಸಿಸಿಲ್ಲಿನ್ ದರ ಟ್ಯಾಬ್ಲೆಟ್‌ಗೆ 22.30 ರೂ.ಯಿದ್ದು, ಇನ್ನು 16.80 ರೂ. ಆಗಲಿದೆ. ಔಷಧ ಗಳ ಹೊಸ ಸ್ಟಾಕ್ ಮಾರುಕಟ್ಟೆಗೆ ಬರಲು ಸಮಯ ಹಿಡಿಯುವ ಹಿನ್ನೆಲೆ ಜನವರಿ ಅಂತ್ಯದಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ.
ಬೆಲೆ ಇಳಿಕೆಯ ಅಧಿಸೂಚನೆಯನ್ನು NPCA ಹೊರಡಿಸಿದೆ. NPCA ಯ ಅಧಿಸೂಚನೆಯ ಪ್ರಕಾರ, ಔಷಧ ತಯಾರಿಕಾ ಕಂಪನಿಗಳು ಸ್ವತಃ GST ಪಾವತಿಸಿದರೆ ಮಾತ್ರ GST ಸೇರಿಸಲು ಅನುಮತಿಸಲಾಗುತ್ತದೆಯಾಗಿದೆ.