Friday, June 27, 2025

2024ರ WPL ಮತ್ತು IPL ಫೈನಲ್‌ ಪಂದ್ಯಗಳಲ್ಲಿ ಒಂದೇ ರೀತಿಯ ಅಂಕಿ ಅಂಶ – ಕೆಲವು ಸಾಮ್ಯತೆ; ಕ್ರಿಕೆಟ್ ಲೋಕಕ್ಕೆ ಅಚ್ಚರಿ

2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಮತ್ತು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯಗಳ ನಡುವಿನ ಕೆಲವು ಸಾಮ್ಯತೆಗಳು ಕ್ರಿಕೆಟ್ ಲೋಕವನ್ನು ದಿಗ್ಭ್ರಮೆಗೊಳಿಸಿದೆ.

ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಏಕಪಕ್ಷೀಯವಾಗಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ, ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಈ ವರ್ಷದ ಆರಂಭದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಬಳಿಕ ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

ಈ ಗೆದ್ದ ಪಂದ್ಯಾಟಕ್ಕೆ ಕೆಲವೊಂದು ಸಾಮ್ಯತೆಗಳಿವೆ ಎಂಬುವುದು ಸದ್ಯ ಚರ್ಚೆಯಾಗುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡವನ್ನು ಕೆಕೆಆರ್ ಬೌಲರ್‌ಗಳು 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಮಾಡಿದರು. ಇದು ಐಪಿಎಲ್ 2024ರ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಇದೇ ವೇಳೆ, ಇದಕ್ಕೂ ಮುನ್ನ 2024ರ ಡಬ್ಲ್ಯುಪಿಎಲ್‌ನಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡವು ಮಾರ್ಚ್ 17ರಂದು 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವನ್ನು ಆಲೌಟ್ ಮಾಡಿತ್ತು.

2024ರ ಡಬ್ಲ್ಯುಪಿಎಲ್‌ನಲ್ಲಿ ಭಾರತೀಯ ನಾಯಕತ್ವದ ತಂಡ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದರೆ, 2024ರ ಐಪಿಎಲ್‌ನಲ್ಲಿ ಭಾರತೀಯ ನಾಯಕತ್ವದ ತಂಡ ಕೂಡ 8 ವಿಕೆಟ್‌ಗಳಿಂದ ದಿಗ್ವಿಜಯ ಸಾಧಿಸಿತು.

ಇದು ಎರಡು ಫೈನಲ್‌ ಪಂದ್ಯಗಳ ನಡುವಿನ ಕೆಲವು ಸಾಮ್ಯತೆಗಳಲ್ಲಿ ಒಂದಾಗಿದೆ. ಕುತೂಹಲಕಾರಿಯಾಗಿ, ಸನ್ ರೈಸರ್ಸ್ ಹೈದರಾಬಾದ್ ಪುರುಷ ತಂಡ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದಲ್ಲಿ ಸೋತ ಎರಡು ತಂಡಗಳು ಪುರುಷರ ಮತ್ತು ಮಹಿಳಾ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ನಾಯಕರನ್ನು ತಮ್ಮ ನಾಯಕರನ್ನಾಗಿ ಹೊಂದಿದ್ದವು ಎಂಬುದು ಗಮನಾರ್ಹ ಸಂಗತಿ.

Related Articles

Latest Articles