Monday, December 9, 2024

ವೀರ ಸವಾರ್ಕರ್‌ ಹೆಸರಿನ ಫಲಕಕ್ಕೆ ಮಸಿ ಬಳಿದ ಪುಂಡರ ಬಂಧನ

ಬೆಂಗಳೂರು: ವೀರ ಸಾವರ್ಕರ್ ಸೇತುವೆ ಮೇಲಿನ ಹೆಸರಿಗೆ ಪುಂಡರು ಮಸಿ ಬಳಿದ ಘಟನೆ ಯಲಹಂಕದ 4ನೇ ವಾರ್ಡ್​ನ ಡೇರಿ ಸರ್ಕಲ್ ಬಳಿ ನಡೆದಿತ್ತು. ಈ ಘಟನೆಗೆ ಹಿಂದೂ ಪರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದು ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರವೀಣ್, ರಕ್ಷ ರಾಜ್ ಹಾಗೂ ನಿಶ್ಚಿತ್ ಗೌಡ ಎಂಬ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಇಂದು(ಮೇ.28) ವೀರ ಸಾವರ್ಕರ್ ಜನ್ಮದಿನವಾಗಿದ್ದು, ಇಂದೇ ಕೆಲ ಯುವಕರು ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ.

ವೀರ ಸಾವರ್ಕರ್​ಗೆ ಸಿಗುತ್ತಿರುವ ಗೌರವ ಭಗತ್ ಸಿಂಗ್​ಗೆ ಸಿಗುತ್ತಿಲ್ಲ. ಸಾವರ್ಕರ್ ಸೇತುವೆ ಬದಲು‌ ಭಗತ್ ಸಿಂಗ್ ಹೆಸರಿಡುವಂತೆ ಆಗ್ರಹಿಸಿ ಮಧ್ಯಾಹ್ನ 1.50ರ ವೇಳೆಗೆ ಪುಂಡರು ಸೇರಿಕೊಂಡು ಸಾವರ್ಕರ್​ ಹೆಸರಿಗೆ ಮಸಿ ಬಳಿದಿದ್ದರು. ಈ ಹಿಂದೆ ಸೇತುವೆಗೆ ವೀರ ಸಾವರ್ಕರ್ ಹೆಸರಿಟ್ಟಾಗಲೂ ವಿವಾದವಾಗಿತ್ತು. ಇನ್ನು ಕೂಡಲೇ ಕೃತ್ಯ ಎಸಗಿದ್ದ ಮಾಗಡಿ ರೋಡ್​ನ ಯುವಕ ಸೇರಿ ಮೂವರನ್ನ ಬೆಂಗಳೂರು ನಗರ ಜಿಲ್ಲೆ ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಇನ್ನು ಘಟನೆ ಖಂಡಿಸಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ, ಕಾಂಗ್ರೆಸ್ ನಾಯಕರ ಫೋಟೋಗಳು ಯಲಹಂಕದಲ್ಲಿವೆ. ಆದರೆ, ನಾವು ಯಾವುದೇ ಪೋಟೋಗಳಿಗೂ ಮಸಿ ಬಳಿದಿಲ್ಲ. ವೀರ ಸಾವರ್ಕರ್ ಇತಿಹಾಸವನ್ನು ಕಾಂಗ್ರೆಸ್‌ನವರು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು. ಈಗ ಮೂವರನ್ನು ಬಂಧಿಸಿದ್ದು, ಉಳಿದವರನ್ನು ಶೀಘ್ರವಾಗಿ ಬಂಧನ ಮಾಡಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.

Related Articles

Latest Articles