ಬೀದರ್: ಮಹಿಳಾ ಸಹೋದ್ಯೋಗಿ ಜತೆ ಅಸಭ್ಯ ವರ್ತನೆ ಮಾಡಿದ ಆರೋಪದಿಂದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು ನೀಡಿದ ಘಟನೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದಲ್ಲಿ ನಡೆದಿದೆ. ಪಿಡಿಓ ಯೋಗೀಶ್ ಹಿರೇಮಠ ಮತ್ತು ಕರವಸೂಲಿಗಾರ ಮಿಥುನ್ ಎಂಬಾತನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆ ಜತೆ ಇವ್ರು ಅಸಭ್ಯ ವರ್ತನೆ ತೋರಿದ್ದರು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಗ್ರಾಮಸ್ಥರೊಂದಿಗೆ ಮಾತಿಗಿಳಿದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು ನೀಡಿದ್ದಾರೆ.
ಇನ್ನು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಮುಡಬಿ ಠಾಣಾ ಪೊಲೀಸ್ರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ತಾಲೂಕು ಪಂಚಾಯತಿ ಇಡಿ ಸಂತೋಷ್ ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರು ಮಹಿಳೆ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.