ಬೀದಿ ಬದಿಯ ಆಹಾರ ಸೇವನೆ ಅಷ್ಟೊಂದು ಉತ್ತಮವಲ್ಲ ಎನ್ನುವ ಮಾತು ಆಗಾಗ ಕೇಳಿ ಬರುತ್ತದೆ. ಅದಕ್ಕೆ ಮುಖ್ಯ ಕಾರಣ ಎಂದರೆ ಕೆಲವು ಬೀದಿ ಬದಿ ವ್ಯಾಪಾರಿಗಳು ಶುಚಿತ್ವ ಪಾಲಿಸುವುದಿಲ್ಲ ಎನ್ನುವುದು. ಕೆಲವೊಮ್ಮೆ ಬೀದಿ ಬದಿ ವ್ಯಾಪಾರಿಗಳು ಆಹಾರಕ್ಕೆ ಕಲುಷಿತ ನೀರು ಸೇರಿಸುವುದು, ತರಕಾರಿಯನ್ನು ತೊಳೆಯದೆ ಬಳಸುವುದು ಮುಂತಾದ ವಿಡಿಯೊ ನೋಡಿದ್ದೇವೆ.
ಈಗ ಅದಕ್ಕಿಂತಲೂ ಅಸಹ್ಯಕಾರ ವಿಡಿಯೋ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆ ನೆಕ್ಕೊಂಡಾ ಪ್ರದೇಶದಲ್ಲಿ ನಡೆದಿದೆ. ಐಸ್ ಕ್ರೀಮ್ ಮಾರಾಟಗಾರನೊಬ್ಬ ಸಾರ್ವಜನಿಕರ ದೊಡ್ಡ ಮಟ್ಟದ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಆತನ ವಿಡಿಯೋ ವೈರಲ್ ಆಗಿದ್ದು, ತಳ್ಳುವ ಗಾಡಿಯಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುವ ಆತ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದಲ್ಲದೆ, ವೀರ್ಯವನ್ನು ಫಾಲೂದಾ ಐಸ್‌ಕ್ರೀಮ್‌ಗೆ ಮಿಕ್ಸ್ ಮಾಡಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಅಸಹ್ಯಕರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಆರೋಗ್ಯ ಕಾಳಜಿಯನ್ನು ಕಾಯ್ದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಐಸ್‌ಕ್ರೀಮ್‌ಗೆ ವೀರ್ಯವನ್ನು ಮಿಕ್ಸ್ ಮಾಡುವ ಮುನ್ನ ಸಾರ್ವಜನಿಕವಾಗಿಯೇ ಹಸ್ತಮೈಥುನ ಮಾಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಸುತ್ತಮುತ್ತಲಿನ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.