Monday, October 14, 2024

ಸೌಜನ್ಯಾಳ ಟ್ಯಾಬ್ಲೋ ತಡೆಹಿಡಿದವರಿಗೆ ಸೌಜನ್ಯ ಶಾಪ ತಟ್ಟುವುದು ಖಂಡಿತಾ – ಪ್ರಸನ್ನ ರವಿ ಆಕ್ರೋಶ

ಮಂಗಳೂರು : ಕುದ್ರೋಳಿ ದಸರಾದ ಶೋಭಾಯಾತ್ರೆಯಲ್ಲಿ ಸೌಜನ್ಯಳ ಭಾವಚಿತ್ರ ಹಾಕಿ ಟ್ಯಾಬ್ಲೊಗೆ ನಿಷೇಧಿಸಿದ ಬಗ್ಗೆ ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ದಿ ಮಂಗಳೂರು ಮಿರರ್ ಅನ್ನುವ ಸುದ್ದಿ ವಾಹಿನಿಗೆ ಇಂಚಿಂಚು ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳವಾರದ ಮಂಗಳೂರು ದಸರಾ ಮೆರವಣಿಗೆಯಲ್ಲಿ ಕುಮಾರಿ ಸೌಜನ್ಯಾಳ ಫೋಟೊ ಹಾಕಿದ್ದ ಟ್ಯಾಬ್ಲೋವನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸಂಚಾರಕ್ಕೆ ಅವಕಾಶ ನೀಡದೆ ಪೊಲೀಸರ ಮೂಲಕ ಸೌಜನ್ಯಳ ನ್ಯಾಯಾಕ್ಕಾಗಿ ಮಾಡುತ್ತಿರುವ ಹೋರಾಟ ಹತ್ತಿಕ್ಕಲು ನೋಡಿದವರಿಗೆ ಎದಿರೇಟು ನೀಡಲು ಸೌಜನ್ಯ ಪರ ಇರುವ ಸಾವಿರಾರು ಹೋರಾಟಗಾರರು ನಿರ್ಧರಿಸಿದ್ದಾರೆ.

👇 Watch Video – click link below

https://youtu.be/qUMWI29S0iQ?si=vTKqrLzGA04aHqa4

ನವರಾತ್ರಿ ಸಂದರ್ಭದಲ್ಲಿ ಕುದ್ರೊಳಿ ಆಡಳಿತ ಸಮಿತಿ ಸೌಜನ್ಯಾಗೆ ದ್ರೋಹ ಮಾಡಿದ್ದಾರೆ. ಅತ್ಯಾಚಾರಿಗಳ ಪರ ನಿಂತಿದ್ದಾರೆ. ಇವರಿಗೆ ಆ ಶಿವನೇ ಮುನಿಯುತ್ತಾನೆ. ಜನಾರ್ದನ ಪೂಜಾರಿ ಹಿಂದಿನಂತೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲ ಖಂಡಿತ ಇದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ನಾನೇ ಸ್ವತಃ ಪೂಜಾರಿ ಅವರನ್ನು ಕಂಡು ಈ ಕಹಿ ಅನುಭವದ ಬಗ್ಗೆ ಮಾತಾನಾಡುತ್ತೇನೆ. ಇದಕ್ಕೆ ಯಾವುದೇ ದೊಣ್ಣೆನಾಯಕರ ಅಪ್ಪಣೆ ಬೇಡಾ ಎಂದು ಟ್ಯಾಬ್ಲೋ ಆಕ್ಷೇಪಿಸಿದವರ ವಿರುದ್ದ ಹರಿಹಾಯ್ದಿದ್ದಾರೆ.

https://youtu.be/qUMWI29S0iQ?si=CR8MjnPmOstSxBQ6

Related Articles

Latest Articles