ಅಮೇರಿಕಾ: ಲೆವಿಸ್ಟಾನ್(Lewiston) ಪ್ರಾಂತ್ಯದ ಮೈನೆ(Maine) ಪಟ್ಟಣದ ವಿವಿದೆಡೆ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು , ದಾಳಿಗೆ 22 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಸದ್ಯ ದಾಳಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಮೈನೆ ಪಟ್ಟಣದ ರೆಸ್ಟೋರೆಂಟ್ ಹಾಗೂ ವಿವಿಧ ಸ್ಥಳಗಳಲ್ಲಿ ಬಂದೂಕುಧಾರಿಗಳಿಂದ ಜನರ ಮೇಲೆ ಗುಂಡಿನ ದಾಳಿ ನಡೆದಿದ್ದು, 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಯುಎಸ್ ಪೊಲೀಸ್ ಇಲಾಖೆ ಶಂಕಿತನೊಬ್ಬನ ಫೋಟೊ ಬಿಡುಗಡೆ ಮಾಡಿದ್ದು , ದಾಳಿಕೋರರಿಗಾಗಿ ಹುಡುಕಾಟ ನಡೆಸುತ್ತಿದೆ. ಸದ್ಯ ಯಾರೂ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಸಾಮೂಹಿಕ ಗುಂಡಿನ ದಾಳಿ ಬಗ್ಗೆ ಅಮೆರಿಕಾ ಅಧ್ಯಕ್ಷ ಜೊ ಬೈಡನ್‌ಗೆ ಕೂಡ ಮಾಹಿತಿ ನಿಡಲಾಗಿದೆ.