Thursday, November 14, 2024

ರಾಮೇಶ್ವರಂ ಕೆಫೆ ಬಾಂಬರ್‌ ಫೋಟೋ ರಿಲೀಸ್: ₹10 ಲಕ್ಷ ನಗದು ಬಹುಮಾನ ಘೋಷಣೆ – ಎನ್ಐಎ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರೆದಿದೆ. ಈ‌ ನಡುವೆ ಬಾಂಬರ್‌ಗಾಗಿ ತೀವ್ರ ಶೋಧ ನಡೆಸುತ್ತಿರುವ ಎನ್‌ಐಎ ಪ್ರಮುಖ ಆರೋಪಿಗಳ ಫೋಟೋ ಬಿಡುಗಡೆಗೊಳಿಸಿದೆ. ಆರೋಪಿಗಳ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.

ಶಂಕಿತ ಆರೋಪಿಗಳ ಫೋಟೋ ಸಮೇತ ಪೋಸ್ಟ್​ ಮಾಡಿರುವ NIA ಆರೋಪಿ ಸುಳಿವು ಕೊಟ್ಟವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತೆ. ಸುಳಿವು ಸಿಕ್ಕಿದ್ದಲ್ಲಿ 08029510900 & 8904241100 ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಆರೋಪಿ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಕ್ಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹಾ ಇಬ್ಬರ ಫೋಟೋವನ್ನು ರಿಲೀಸ್​ ಮಾಡಿ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತೀವ್ರ ಹುಡುಕಾಟದ ಜೊತೆಗೆ ಇಬ್ಬರು ಪ್ರಮುಖ ಆರೋಪಿಯ ಸುಳಿವು ಕೊಟ್ಟವರಿಗೆ ಎನ್‌ಐಎ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದೆ.

Related Articles

Latest Articles