Wednesday, September 11, 2024

ಮನೆ ಅಡಿಪಾಯ ತೆಗೆಯುವ ವೇಳೆ ಶ್ರೀರಾಮನ ಮೂರ್ತಿ ಪತ್ತೆ – ಭಾರೀ ಸಂಚಲನ

ಶ್ರೀರಾಮನನ್ನು ಹಲವು ಬಾರಿ ಅಪಹಾಸ್ಯ ಮಾಡಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ತವರು ಜಿಲ್ಲೆ ತಿರುವಾರೂರಿನಲ್ಲಿ ಇದೀಗ ರಾಮನ ವಿಗ್ರಹ ಪತ್ತೆಯಾಗಿದೆ. ತಿರುವಾರೂರಿನ ಹೂವಿನ ಅಂಗಡಿ ಮಾಲೀಕ ಮಾರಿಮುತ್ತು ಅವರು ತಮ್ಮ ಮನೆಗೆ ಅಡಿಪಾಯವನ್ನು ಅಗೆಯುವ ವೇಳೆ ಶ್ರೀರಾಮನ ಈ ಪುರಾತನ ಮೂರ್ತಿಯ ಪತ್ತೆಯಾಗಿದ್ದು, ಸ್ಥಳೀಯ ಜನರಿಗೆ ಅಚ್ಚರಿಯುಂಟು ಮಾಡಿದೆ.

ಪಂಚ ಲೋಹದಿಂದ ರಚಿಸಲಾದ ಅಮೂಲ್ಯ ಮೂರ್ತಿಯು ಸುಮಾರು 2 ಅಡಿ ಎತ್ತರವಿದೆ. ಮೂರ್ತಿ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಹೂವಿನ ಹಾರ ಫಲಪುಷ್ಪವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಬಳಿಕ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಹಶೀಲ್ದಾರ್ ದೇವೇಂದ್ರನ್ ಅವರೊಂದಿಗೆ ಗ್ರಾ.ಪಂ ಆಡಳಿತಾಧಿಕಾರಿ ರಾಜಕುಮಾರ್ ಸ್ಥಳಕ್ಕೆ ಆಗಮಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂರ್ತಿಯನ್ನು ವಶಪಡಿಸಿಕೊಂಡು ತಹಶೀಲ್ದಾರ್ ಕಚೇರಿಗೆ ಸಾಗಿಸಲು ವ್ಯವಸ್ಥೆ ಮಾಡಲಾಯಿತು. ‘ಪುರಾತತ್ವಶಾಸ್ತ್ರಜ್ಞರ ಪರೀಕ್ಷೆಯ ನಂತರವೇ ಪ್ರತಿಮೆಯ ನಿಜವಾದ ಸ್ವರೂಪ ಮತ್ತು ಮೌಲ್ಯವನ್ನು ಕಂಡುಹಿಡಿಯಬಹುದು’ ಎಂದು ದೇವೇಂದ್ರನ್ ಹೇಳಿರುವುದು ವರದಿಯಾಗಿದೆ.

Related Articles

Latest Articles