ಕಾಸರಗೋಡು: ಕುಂಬಳೆ ಮತ್ತು ಕಾಸರಗೋಡು ನಡುವೆ ರೈಲಿನಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಮಾ. 28 ರಂದು ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಕಣ್ಣೂರಿನ ಕೂತುಪರಂಬದ ರವೂಫ್ ಅವರ ಪುತ್ರ ಅಬ್ದುಲ್ ರಮೀಮ್ ರಫಿ (19) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ
ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಅಬ್ದುಲ್ ರಮೀಮ್ ರಫಿ ಮಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ರೈಲಿನಿಂದ ಬಿದ್ದಿದ್ದಾರೆ. ಕಾಸರಗೋಡು ನಡುವಿನ ಕಲ್ಲಂಗೈ ಸೇತುವೆ ಬಳಿಯ ಹೊಂಡದಲ್ಲಿ ಮಾ. 28ರ ಸಂಜೆ 7:30 ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.
ಮಧ್ಯಾಹ್ನ 2:30ಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಹ ವಿದ್ಯಾರ್ಥಿಗಳು ನೀಡಿದ ಮಾಹಿತಿ ಪ್ರಕಾರ, ರಫಿ ಅವರು ಮಂಗಳೂರು ಮತ್ತು ಚೆನ್ನೈ ನಡುವೆ ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದಾರೆ. ಇದಕ್ಕೆ ಸ್ಪಂದಿಸಿದ ಕಾಸರಗೋಡು ರೈಲ್ವೇ ಪೊಲೀಸರು, ರೈಲ್ವೇ ಭದ್ರತಾ ಪಡೆ, ಕುಂಬಳೆ ಪೊಲೀಸರು, ನಾಗರಿಕರು ಮತ್ತು ವಿದ್ಯಾರ್ಥಿಗಳು ಸೇರಿ ಹುಡುಕಾಟ ಆರಂಭಿಸಿದ್ದಾರೆ. ಸಂಜೆಯ ವೇಳೆಗೆ ಚೌಕಿ ಕಲ್ಲಂಗೈ ಬಳಿ ಶವ ಪತ್ತೆಯಾಗಿದೆ. ಏಕೈಕ ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.