Monday, September 16, 2024

ಪುಲ್ವಾಮಾ ಬಾಂಬ್‌ ದಾಳಿಗೆ ಐದು ವರ್ಷ, ಸಿಆರ್‌ಪಿಎಫ್‌ ಯೋಧರಿದ್ದ ಬಸ್‌ಗೆ ಆತ್ಮಾಹುತಿ ಬಾಂಬರ್‌ ದಾಳಿ ಮಾಡಿದ ಕರಾಳ ನೆನಪು

ಐದು ವರ್ಷಗಳ ಹಿಂದೆ ಅಂದರೆ 2019ರಂದು ಭಾರತದ ಇತಿಹಾಸದಲ್ಲಿ ಫೆಬ್ರವರಿ 14ರಂದು ಕರಾಳ ನೆನಪೊಂದು ದಾಖಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆದಿತ್ತು. ಉಗ್ರರ ಈ ಕೃತ್ಯಕ್ಕೆ ಸೇನಾ ವಾಹನದಲ್ಲಿ ಹೋಗುತ್ತಿದ್ದ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು.

14 ಫೆಬ್ರವರಿ 2019ರಂದು ಪುಲ್ವಾಮಾ ದಾಳಿ ನಡೆದಿತ್ತು. 40 ಸಿಆರ್‌ಪಿಎಫ್‌ ಯೋಧರು ಸಾಗುತ್ತಿದ್ದ ಎರಡು ಬಸ್‌ಗಳ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆಯಿತು. ದಾಳಿ ನಡೆದ ಕೆಲವೇ ಸಮಯದಲ್ಲಿ ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು. ಆದಿಲ್ ಅಹ್ಮದ್ ದಾರ್ ಹೆಸರಿನ ಆತ್ಮಾಹುತಿ ಬಾಂಬರ್ ಈ ದಾಳಿ ನಡೆಸಿದ್ದ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿಬಾಗ್, ಕಾಕಪೋರಾ ನಿವಾಸಿ ಎನ್ನಲಾಗಿದೆ.

ಮರುದಿನ ಭಾರತದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನವನ್ನು ಈ ದಾಳಿಯ ಹೊಣೆಗಾರನ್ನಾಗಿ ಮಾಡಿತು. ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿತು. ಜೆಎಂ ನಾಯಕ ಮಸೂದ್‌ ಅಜರ್‌ಗೆ ಪಾಕಿಸ್ತಾನ ಸಂಪೂರ್ಣ ಬೆಂಬಲ ನೀಡುವುದೇ ಇಂತಹ ದಾಳಿಗಳಿಗೆ ಕಾರಣ ಎಂದಿತು.

ಭದ್ರತಾ ಪಡೆಗಳನ್ನು ಬೆಂಬಲಿಸುವ ನಿರ್ಣಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿದವು.
ಪಾಕಿಸ್ತಾನಿ ಸರಕುಗಳ ಮೇಲೆ ಕಸ್ಟಮ್ಸ್‌ ಸುಂಕವನ್ನು ಶೇಕಡ 200ರಷ್ಟು ಹೆಚ್ಚಿಸಲಾಯಿತು. ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿ ನಡೆಸಲಾಯಿತು. ಜೆಎಂ ಜತೆಗೆ ಸಂಪರ್ಕ ಹೊಂದಿರುವ ಏಳು ಜನರನ್ನು ಬಂಧಿಸಲಾಯಿತು.

ಪ್ರತ್ಯೇಕತಾವಾದಿ ನಾಯಕರಿಗೆ ನೀಡಿದ ಭದ್ರತೆಗಳನ್ನು ಹಿಂದೆಗೆದುಕೊಳ್ಳಲಾಯಿತು. ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. ಪುಲ್ವಾಮಾ ದಾಳಿಯ ಹನ್ನೆರಡು ದಿನಗಳಲ್ಲಿ ಅತ್ಯಂತ ನಿಖರ ದಾಳಿ ನಡೆಸಿತು.


ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ ಶಿಬಿರಗಳ ಮೇಲೆ ಮತ್ತು ಗಡಿ ನಿಯಂತ್ರಣ ರೇಖೆಯಾದ್ಯಂತ ಬಾಂಬ್‌ ಹಾಕಲಾಗಿತ್ತು.
ಭಾರತದ ದಾಳಿಯಿಂದ ಬಾಲಾಕೋಟ್‌ನ ಜೆಇಎಂ ಶಿಬಿರವು ಸಂಪೂರ್ಣವಾಗಿ ನಾಶಗೊಂಡಿದೆ ಎನ್ನಲಾಗಿದೆ.

ಪಾಕಿಸ್ತಾನದ ಗಡಿ ದಾಟಿ ಭಾರತದ ಯುದ್ಧವಿಮಾನಗಳು ಈ ದಾಳಿ ನಡೆಸಿವೆ. ಬಳಿಕ ಪಾಕಿಸ್ತಾನವು ಭಾರತೀಯ ಸೇನಾ ಸೌಲಭ್ಯವನ್ನು ಗುರಿಯಾಗಿಸಿ ದಾಳಿ ಮಾಡಲು ಯತ್ನಿಸಿತು. ಈ ಸಂದರ್ಭದಲ್ಲಿ ಪ್ರತಿದಾಳಿ ನಡೆಸಿದ ಐಎಎಫ್‌ ವಿಂಗ್‌ ಕಮಾಂಡರ್‌ ಅಭಿನಂದನ್‌ನನ್ನು ಪಾಕಿಸ್ತಾನ ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಯಿತು.

Related Articles

Latest Articles