Wednesday, June 19, 2024

ಪುಷ್ಪಾ ಮಾದರಿಯಲ್ಲೇ ಕೋಟಿ ಕೋಟಿ ಗಾಂಜಾ ಸಾಗಿಸಿ ಸಿಕ್ಕಿಬಿದ್ದ ಗ್ಯಾಂಗ್

ಪುಷ್ಪಾ ಸಿನಿಮಾ ಮಾದರಿಯಲ್ಲೇ ಕ್ಯಾಂಟರ್​​ನಲ್ಲಿ ಕೋಟ್ಯಾಂತರ ಮೌಲ್ಯದ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗ್​​ವೊಂದು ಪೊಲೀಸರಿಗೆ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿದೆ. ಸೆಂದಿಲ್​​ ಕುಮಾರ್​​​, ರವಿಕುಮಾರ್​​​, ಉಮಾ ಶಂಕರ್ ಹಾಗೂ ವಿನಾಯಕ್​ ಎಂಬುವರು ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು.

ನೆರೆಯ ರಾಜ್ಯ ಆಂಧ್ರದಿಂದ ಕೊಳ್ಳೆಗಾಲ ಮಾರ್ಗವಾಗಿ ಹನೂರಿಗೆ ಈ ಗ್ಯಾಂಗ್​​​​​ ಕ್ಯಾಂಟರ್​​ನಲ್ಲಿ ಬರೋಬ್ಬರಿ 221 ಕೆಜಿ ಗಾಂಜಾ ಸಾಗಿಸುತ್ತಿದ್ದರು. ಅದರಲ್ಲೂ ಕ್ಯಾಂಟರ್​​ನಲ್ಲಿ ಫ್ಲೈವುಡ್​​ ಶೀಟ್​ಗಳ ಮಧ್ಯೆ 4 ಚೀಲಗಳಲ್ಲಿ ಗಾಂಜಾ ಇಟ್ಟು ಸಾಗಿಸಿ ಸಿಕ್ಕಿಬಿದ್ದಿದ್ದಾರೆ.

ಇದೇ ಮೊದಲ ಬಾರಿಗೆ ಚಾಮರಾಜನಗರ ಇತಿಹಾಸದಲ್ಲೇ 1 ಕೋಟಿ 10 ಲಕ್ಷ ಮೌಲ್ಯದ 221 ಕೆಜಿ ಗಾಂಜಾ ಸಿಕ್ಕಿದೆ. ಖಚಿತ ಮಾಹಿತಿ ಮೇರೆಗೆ ತಡ ರಾತ್ರಿ ಕೊಳ್ಳೆಗಾಲ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲೇ ಚೇಸ್​ ಮಾಡಿ ಕ್ಯಾಂಟರ್​​ಗೆ ಅಡ್ಡ ಹಾಕಿ, ಮಾಲ್​ ಸಮೇತ ಎಸ್ಕೇಪ್​​ ಆಗಲು ಮುಂದಾಗಿದ್ದ ಗ್ಯಾಂಗ್​​​ ಅನ್ನು ಹಿಡಿದರು.

ಸದ್ಯ ಎನ್​​ಡಿಪಿಎಸ್​​ ಕಾಯ್ದೆ ಅಡಿ ಆರೋಪಿಗಳ ಬಂಧನವಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Related Articles

Latest Articles