ಪತಿಯೊಬ್ಬ ಮೊದಲ ರಾತ್ರಿಯಂದು ಕಾಮೋತ್ತೇಜಕ ಮಾತ್ರೆ ಸೇವಿಸಿ ಮಿಲನ ನಡೆಸಿದ ಪರಿಣಾಮ ನವವಿವಾಹಿತೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.
ಫೆ. 3ರಂದು ಉರೈ ಮೂಲದ ವ್ಯಕ್ತಿಯೊಂದಿಗೆ ಯುವತಿಯ ವಿವಾಹವಾಗಿತ್ತು. ಯುವತಿಯ ಪೋಷಕರು ಮೃತಪಟ್ಟಿದ್ದರಿಂದ ಸರ್ಕಾರಿ ನೌಕರಿಯಲ್ಲಿರುವ ಆಕೆಯ ಸಹೋದರನೇ ಮುಂದೆ ನಿಂತು ಅದ್ಧೂರಿಯಾಗಿ ವಿವಾಹ ಮಾಡಿಸಿಕೊಟ್ಟಿದ್ದ. ಫೆ. 4ರಂದು ಯುವತಿ ಎಲ್ಲಾ ಶಾಸ್ತ್ರದ ಬಳಿಕ ತನ್ನ ಮನೆಯಿಂದ ಗಂಡನ ಮನೆಗೆ ಬಂದಿದ್ದಳು.
ಮೊದಲ ದಿನದ ರಾತ್ರಿಯಂದು ಸಂಭೋಗಕ್ಕಾಗಿ ವಧುವಿನ ಪತಿ ಕಾಮೋತ್ತೇಜಕ ಮಾತ್ರೆ ಸೇವಿಸಿದ್ದಾನೆ. ಅದಾದ ಬಳಿಕ ಆಕೆಯೊಂದಿಗೆ ದುಷ್ಕೃತ್ಯವನ್ನು ಎಸೆಗಿದ್ದಾನೆ. ಈ ವೇಳೆ ಆಕೆ ತೀವ್ರ ಗಾಯಗೊಂಡಿದ್ದು, ಆಕೆಯ ಸ್ಥಿತಿಯು ಹದಗೆಡಲು ಪ್ರಾರಂಭಿಸಿದೆ. ಇದರಿಂದಾಗಿ ಆಕೆಯನ್ನು ಸ್ತ್ರೀ ರೋಗತಜ್ಞರ ಬಳಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆಕೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ವೈದ್ಯರು ಹೇಳಿದ್ದರು.
ಘಟನೆಯ ಹಿನ್ನೆಲೆಯಲ್ಲಿ ಖಾಸಗಿ ನರ್ಸಿಂಗ್ ಹೋಂಯಲ್ಲಿ ಮಹಿಳೆಯನ್ನು ದಾಖಲಿಸಲಾಗಿತ್ತು. ಆದರೆ ಆಕೆಯ ಖಾಸಗಿ ಭಾಗಗಳಿಗೆ ಆಗಿದ್ದ ಗಾಯಕ್ಕೆ ಸೋಂಕು ತಗುಲಿ ಆಕೆ ಫೆ. 10ರಂದು ಸಾವನ್ನಪ್ಪಿದಾಳೆ.
ಈ ಬಗ್ಗೆ ವರ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.