‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಾ ನೂರಾರು ಕೋಟಿ ಗಳಿಸುವತ್ತ ದಾಪುಗಾಲು ಹಾಕುತ್ತಿದೆ. ಜೂನ್ 27ರಂದು ಬಿಡುಗಡೆ ಆಗಿ ನಾಲ್ಕೇ ದಿನಕ್ಕೆ ಭಾರತದ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿ ಗಳಿಸುವತ್ತ ಹೆಜ್ಜೆ ಇಟ್ಟಿದೆ.
ವಿಶ್ವ ಬಾಕ್ಸ್ ಆಫೀಸ್ನಲ್ಲೂ ಸಿನಿಮಾದ ಕಲೆಕ್ಷನ್ ಭರ್ಜರಿ ಆಗುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಹಾಕಿದ ಹಣ ಬಂದ ಖುಷಿಯಲ್ಲಿ ಚಿತ್ರತಂಡ ಇದೆ.
ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹೀಗೆ ಬಹುಭಾಷಾ ಸೂಪರ್ ಸ್ಟಾರ್ಗಳ ತಾರಾಗಣವೇ ಇದೆ. ಒಟ್ಟು ಪಂಚ ಭಾಷೆಗಳಲ್ಲಿ ಬಿಡುಗಡೆ ಕಂಡಿದೆ. ಎಲ್ಲಾ ಭಾಷೆಗಳಿಂದ 300 ಕೋಟಿ ಬಾಚಿದೆ. ಭಾನುವಾರ ಒಂದೇ ದಿನ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.
ಕಲ್ಕಿ 2898 ಎಡಿ’ ಚಿತ್ರ ಮೂರು ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 415 ಕೋಟಿ ರೂಪಾಯಿ ಬಾಚಿಕೊಂಡಿತ್ತು. ನಾಲ್ಕನೇ ದಿನದ ವಿಶ್ವ ಮಾರುಕಟ್ಟೆ ಲೆಕ್ಕಾಚಾರ ಇನ್ನಷ್ಟೇ ಹೊರಬೀಳಬೇಕಿದೆ. ಅದನ್ನೂ ಸೇರಿದರೆ ಸಿನಿಮಾದ ಗಳಿಕೆ ವಿಶ್ವಮಟ್ಟದಲ್ಲಿ 500 ಕೋಟಿ ರೂಪಾಯಿ ದಾಟಲಿದೆ.
ಸದ್ಯ ಬಂದಿರೋದು ಮೊದಲನೆಯ ಭಾಗ ಮಾತ್ರ. ಎರಡನೇ ಭಾಗ ಕೂಡ ಬರಬೇಕಿದೆ. ಈ ಚಿತ್ರದ ಎರಡನೇ ಭಾಗದ ಶೂಟಿಂಗ್ ಶೇ. 60 ಪೂರ್ಣಗೊಂಡಿದೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಚಿತ್ರವನ್ನು ಹಿಂದಿ ಮಂದಿ ಕೂಡ ಸಖತ್ ಇಷ್ಟಪಟ್ಟಿದ್ದಾರೆ. ಅಲ್ಲಿಯೂ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ.