ಸಾಮಾಜಿಕ ಜಾಲತಾಣದಲ್ಲಿ ಆಗಿದ್ದಾಂಗೆ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಸದ್ಯ ದಕ್ಷಿಣ ಕನ್ನಡದ ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಚಿರತೆಯೊಂದು ನದಿಯ ಪಕ್ಕದಲ್ಲಿ ಹೊಂಚು ಹಾಕುವ ವಿಡಿಯೋ ಹರಿದಾಡುತ್ತಿದೆ.
ಸರಿಸುಮಾರು 2 ನಿಮಿಷಗಳ ಹತ್ತಿರ ಹತ್ತಿರ ಇರುವ ವಿಡಿಯೋದಲ್ಲಿ ಜಾಗ್ವಾರ್ ಒಂದು ಹೊಂಚು ಹಾಕಿ ನದಿಗೆ ದುಮುಕಿ ಮೊಸಳೆಯನ್ನು ಭೇಟೆಯಾಡುತ್ತದೆ. ಈ ವಿಡಿಯೋ ಬಂಟ್ವಾಳ ನದಿಯಲ್ಲಿ ಕಂಡು ಬಂದ ದೃಶ್ಯ ಎಂಬ ಅಡಿಬರಹದಲ್ಲಿ ಶೇರ್ ಆಗುತ್ತಿದೆ.
ಅಸಲಿಗೆ ಇದು ಇಂದು ನಿನ್ನೆ ಮೊನ್ನೆಯದಲ್ಲ. ಬದಲಾಗಿ ಇದೊಂದು ಹಳೆಯ ವಿಡಿಯೋ. ಮೂಲಗಳ ಪ್ರಕಾರ ಇದು ನ್ಯಾಶನಲ್ ಜಿಯೋಗ್ರಾಫಿ ಅಪ್ಲೋಡ್ ಮಾಡಿರುವ ವಿಡಿಯೋ. ಉದ್ದ ವಿಡಿಯೋದ ತುಣುಕನ್ನು ತುಂಡರಿಸಿ ಶೇರ್ ಮಾಡಲಾಗಿದೆ. ಆ ನಂತರ ವೈರಲ್ ಆಗಿ, ಕ್ಲಾರಿಟಿ ಕಳೆದುಕೊಂಡಿದೆ.
ನಾಲ್ಕು ವಾರಗಳ ಹಿಂದೆಯೆ ಯ್ಯೂಟಬರ್ ಒಬ್ಬರು ಈ ವಿಡಿಯೋ ವನ್ನು ತಮ್ಮ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು.
ಸದ್ಯ ಸುಮ್ಮನೆ ಬಂಟ್ವಾಳದಲ್ಲಿ ಚಿರತೆ ಪ್ರತ್ಯಕ್ಷ ಎಂಬ ಅಡಿಬರಹದೊಂದಿಗೆ ಶೇರ್ ಆಗುತ್ತಿದೆ. ಇದೊಂದು ಸುಳ್ಳು ಸುದ್ದಿ ಎಂಬುವುದು ಆ ಮೂಲಕ ಸ್ಪಷ್ಟವಾಗಿದೆ.