ಕಾಸರಗೋಡು: ಜಲಪಾತ ತೋರಿಸುವುದಾಗಿ ತಿಳಿಸಿ ವಿದ್ಯಾರ್ಥಿಯನ್ನು ಕರೆದೊಯ್ದು ಅಸ್ವಭಾವಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬದಿಯಡ್ಕ ಪೊಲೀಸರು ಸೆರೆ ಬಂಧಿಸಿದ್ದಾರೆ. ಮಾವಿನಕಟ್ಟೆ ಬೀಜಂತ್ತಡ್ಕ ನೀರಪ್ಪಾಡಿಯ ಅಬ್ದುಲ್ ರಶೀದ್ (26) ಎಂಬಾತ ಬಂಧಿತ ಆರೋಪಿ.
ಈತ ಇತ್ತೀಚೆಗೆ ಶಾಲಾ ವಿದ್ಯಾರ್ಥಿ, 16ರ ಹರೆಯದ ಬಾಲಕನನ್ನು ಜಲಪಾತ ತೋರಿ ಸಿಕೊಡುವುದಾಗಿ ಕಾರಿನಲ್ಲಿ ಕರೆದೊಯ್ದು ಬಳಿಕ ಕಾಡಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಇದರಂತೆ ಆತನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿಗೆ ನ್ಯಾಯಾಲಯ ಬಂಧನ ವಿಧಿಸಲಾಗಿದೆ.