ಕಾಸರಗೋಡು: ಚುನಾವಣೆಯ ಅಹವಾಲು ಸ್ವೀಕಾರ ಸಭೆಯಲ್ಲಿ ಸಹಾಯಕ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಸಹಿತ 4 ಮಂದಿಗೆ ಒಂದು ವರ್ಷ, 3 ತಿಂಗಳ ಸಜೆಯನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ವಿಧಿಸಿದೆ.
2015 ನ.25ರಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಘಟನೆ ನಡೆದಿತ್ತು. ಘಟನೆ ನಡೆದಾಗ ಎ.ಕೆ.ಎಂ.ಅಶ್ರಫ್(46) ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.
ಮಂಜೇಶ್ವರ ಪಂಚಾಯತಿ ಸದಸ್ಯರಾಗಿದ್ದ ಅಬ್ದುಲ್ಲ ಕಜೆ(58), ಬಡಾಜೆ ನಿವಾಸಿ ಬಶೀರ್ ಕನಿಲ((52), ಬಂಗ್ರ ಮಂಜೇಶ್ವರದ ಅಬ್ದುಲ್ ಖಾದರ್(62) ಇತರ ಆರೋಪಿಗಳು.
‘ಜಿಲ್ಲಾ ಪ್ರಥಮ ದರ್ಜೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವೆ’ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.