Sunday, October 13, 2024

ನಿವೃತ್ತ ಪೊಲೀಸ್ ಅಧಿಕಾರಿಯ ಒಡೆತನದ ಕಟ್ಟಡದಲ್ಲಿ ವೇಶ್ಯಾವಾಟಿಕೆ ಜಾಲ – ಪ್ರಕರಣ ದಾಖಲು

ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದವರ ಮನೆ ಇದು ಎನ್ನುವ ಭಯ ಇಲ್ಲದೇ ಅವರ ಕಟ್ಟಡ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯನ್ನು ಬಾಡಿಗೆ ಪಡೆದು ಫ್ಯಾಮಿಲಿ ಸಲೂನ್ ಹೆಸರಲ್ಲಿ ಮಹೇಶ್​ ಎಂಬಾತ ವೇಶ್ಯಾವಾಟಿಕೆ ನಡೆಸುತ್ತಿರುವುದು ಬಟಾಬಯಲಾಗಿದೆ.

ಒಡನಾಡಿ, ಪೊಲೀಸ್ ಕಮಿಷನರ್ ವಿಶೇಷ ದಳ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಮಾಡಿದೆ. ಮಹೇಶ್ ಎಂಬಾತ ಸಲೂನ್ ನಡೆಸುವುದಾಗಿ ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಕಟ್ಟಡವನ್ನು ಬಾಡಿಗೆ ಪಡೆದುಕೊಂಡಿದ್ದ. ಅದರಂತೆ ಹೊರಗಡೆ ನೋಡುವವರುಗೆ ಫ್ಯಾಮಿಲಿ ಸಲೂನ್ ಅಂತ ಬೋರ್ಡ್ ಹಾಕಿದ್ದ. ಆದ್ರೆ, ಒಳಗಡೆ ಮಾತ್ರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಇದನ್ನು ಒಡನಾಡಿ, ಪೊಲೀಸ್ ಕಮಿಷನರ್ ವಿಶೇಷ ದಳ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದೆ. ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳ ಜೊತೆಗೆ ಕಟ್ಟಡದ ಮಾಲಿಕ ನಿವೃತ್ತ ಅಧಿಕಾರಿ ಜೆ ಬಿ ರಂಗಸ್ವಾಮಿ ಅವರ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ.

ಈದಿನ.ಕಾಮ್ ವರದಿ ಪ್ರಕಾರ, ಜೆ ಬಿ ರಂಗಸ್ವಾಮಿ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಹಲವಾರು ಗಂಭೀರ ಅಪರಾಧಗಳನ್ನು ಪತ್ತೆಹಚ್ಚಿದ ಖ್ಯಾತಿ ಪಡೆದವರು. ಆದರೆ ತಮ್ಮದೇ ಮನೆಯಲ್ಲಿ ಬಾಡಿಗೆ ಪಡೆದಿರುವವರು ನಡೆಸುತ್ತಿರುವ ದಂಧೆ ಅವರ ಪೊಲೀಸ್ ಕಣ್ಣಿಗೆ ಬೀಳಲಿಲ್ಲವೆ ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಮತ್ತಷ್ಟು ಅನುಮಾನ ಹುಟ್ಟಿಸುವ ಸಂಗತಿಯೆಂದರೆ, ಈ ದನಿಯಾ ಸಲೂನ್ ಎದುರುಗಡೆಯೇ ಒಂದು ಟ್ಯೂಷನ್ ಕೇಂದ್ರವಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳು ಈ ಸಲೂನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಲೀಕರಾದ ರಂಗಸ್ವಾಮಿ ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಆದರೆ ರಂಗಸ್ವಾಮಿ ಅವರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಸದಸ್ಯರೊಬ್ಬರು ತಿಳಿಸಿದ್ದಾಗಿ ವರದಿ ಮಾಡಿದೆ.

👇👇 ಈದಿನ.ಕಾಮ್ ವರದಿ

Related Articles

Latest Articles