Tuesday, June 25, 2024

ಹಂದಿಯ ಹೃದಯ ಕಸಿ ಮಾಡಿದ ವ್ಯಕ್ತಿ 40 ದಿನಗಳ ಬಳಿಕ ನಿಧನ

ವೈದ್ಯರು ಇತ್ತೀಚೆಗೆ ವೈದ್ಯಕೀಯ ವಿಜ್ಞಾನ ಜಗತ್ತಿನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ವೈದ್ಯರು ಹಂದಿಯ ಹೃದಯವನ್ನು ಮಾನವ ದೇಹಕ್ಕೆ ಕಸಿ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಹಂದಿಯ ಹೃದಯವನ್ನು ಕಸಿ ಮಾಡಿದ ವ್ಯಕ್ತಿ ಕಸಿ ಮಾಡಿದ 40 ದಿನಗಳ ನಂತರ ನಿಧನರಾಗಿದ್ದಾರೆ. ಇದು ವೈದ್ಯಲೋಕದಲ್ಲಿಯೇ ಎರಡನೇ‌ ಪ್ರಕರಣವಾಗಿದೆ.

ಹಂದಿಯ ಹೃದಯವನ್ನು ಕಸಿ ಮಾಡಿದ ವಿಶ್ವದ ಎರಡನೇ ವ್ಯಕ್ತಿ ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ನಿಧನರಾದರು ಎಂದು ಸಿಎನ್‌ಎನ್ ವರದಿ ಮಾಡಿದೆ.

ವರದಿಯ ಪ್ರಕಾರ, 58 ವರ್ಷದ ಲಾರೆನ್ಸ್ ಫೌಸೆಟ್ ಸೆಪ್ಟೆಂಬರ್ 20 ರಂದು ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು ಆರು ವಾರಗಳ ಕಾಲ ಬದುಕುಳಿದರು ಮತ್ತು ಸೋಮವಾರ ನಿಧನರಾದರು.

ಶಸ್ತ್ರಚಿಕಿತ್ಸೆಯ ನಂತರ ಫೌಸೆಟ್ ತನ್ನ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಹೊಂದಿದ್ದರು. ಆದರೆ ಇತ್ತೀಚೆಗೆ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಡಲು ಪ್ರಾರಂಭಿಸಿತು. ಲಾರೆನ್ಸ್ ಫೌಸೆಟ್ ಅವರನ್ನು ಉಳಿಸಲು ವೈದ್ಯರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ನಿಧನರಾಗಿದ್ದಾರೆ.

Related Articles

Latest Articles