ಬಾಹ್ಯಕಾಶ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯತ್ನಗಳನ್ನು ನಡೆಸುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದೀಗ ಶನಿಗ್ರಹದ ಚಂದ್ರನಂಗಳಕ್ಕೆ ಹಾವಿನ ಆಕಾರದ ವಿಶೇಷ ನೌಕೆಯನ್ನು ಕಳುಹಿಸಲು ಯೋಜನೆ ರೂಪಿಸಿದೆ.
ಹಾವಿನ ರೀತಿಯಲ್ಲಿ ಚಲಿಸುವ ಈ ರೋಬೋಟ್ ಶನಿಗ್ರಹದ ಉಪಗ್ರಹದ ಬಗ್ಗೆ ಅಧ್ಯಯನ ನಡೆಸಲಿದೆ.
ಶನಿ ಗ್ರಹ ಅತ್ಯಂತ ದೊಡ್ಡ ಉಪಗ್ರಹವೇ ಎನ್ಸೆಲಾಡಸ್. ಭೂಮಿಗೆ ಹೇಗೆ ಚಂದ್ರ ಪ್ರಕೃತಿದತ್ತ ಉಪಗ್ರಹವೋ ಅಂತೆಯೆ ಶನಿಗ್ರಹದಲ್ಲೂ ಅಂತಹದ್ದೇ ಉಪಗ್ರಹಗಳಿವೆ. ಅವುಗಳ ಪೈಕಿ ಎನ್ಸೆಲಾಡಸ್ ಅತ್ಯಂತ ಹಿರಿದು ಎನ್ನಲಾಗುತ್ತದೆ. ಎನ್ಸೆಲಾಡಸ್ ಮೇಲೆ ಮಾನವನಿಗೆ ಪೂರಕವಾದ ವಾತಾವರಣ ಇದೆಯೇ ಎಂದು ಪತ್ತೆ ಮಾಡುವುದು ಇದರ ಮೂಲ ಉದ್ದೇಶ.
ಎನ್ಸೆಲಾಡಸ್ ನ ಮೇಲ್ಮೈ ಹಿಮದಿಂದ ಆವೃತವಾಗಿರುವ ಕಾರಣ ಸಾಮಾನ್ಯ ಸಾಧನಗಳಿಂದ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನಾಸಾ ವಿಜ್ಞಾನಿಗಳು ಹಾವಿನ ರೀತಿಯ ರೋಬೋಟ್ ಸಿದ್ಧಪಡಿಸಿದ್ದು, ಇದು ಮಂಜಿನ ಎಡೆಯಲ್ಲಿ ಸಲೀಸಾಗಿ ಪ್ರಯಾಣಿಸಬಲ್ಲದು.