Wednesday, February 19, 2025

ಕಾಸರಗೋಡು: ಬಾಲಕಿಗೆ ಲೈಂಗಿಕ ‌ಕಿರುಕುಳ; ಬಂಟ್ವಾಳ ಮೂಲದ ವ್ಯಕ್ತಿ ಅರೆಸ್ಟ್

ಮಂಜೇಶ್ವರ: ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಬಂಟ್ವಾಳ ನಿವಾಸಿ ಕ್ರಿಸ್ತು ಡಿ’ಸೋಜಾ (೫೪) ಬಂಧಿತ ಆರೋಪಿ.‌

ಈತ ಇತ್ತೀಚೆಗೆ ಹದಿನಾಲ್ಕರ ಹರೆಯದ ಬಾಲಕಿಗೆ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ಮಂಜೇಶ್ವರ ನಿವಾಸಿಗೆ ಲಭಿಸಿದ ದೂರಿನಂತೆ ಕ್ರಿಸ್ತು ಡಿ’ಸೋಜಾನ ವಿರುದ್ದ ಫೋಕ್ಸೋ ಕೇಸು ದಾಖಲಿಸಲಾಗಿತ್ತು.

ಕೇಸು ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Related Articles

Latest Articles