ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಆ ಪೈಕಿ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಅಧಿಕೃತವಾಗಿದೆ. ಶನಿವಾರ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದು. ಈಗ ಇದೇ ಸುಮಲತಾ ಬಗ್ಗೆ ಚೇತನ್ ಅಹಿಂಸಾ ಮತ್ತೆ ಮಾತನಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ. ನಿತ್ಯದ ಬೆಳವಣಿಗೆಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ, ರಾಜಕೀಯ ಸೇರಿ ತಮ್ಮ ಗಮನಕ್ಕೆ ಬಂದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರುತ್ತಾರೆ. ಈ ಹಿಂದೆ ಅಂಬರೀಶ್ ಸ್ಮಾರಕದ ವಿಚಾರವನ್ನು ಟೀಕಿಸಿ, ಅದಕ್ಕೆ ಬಳಸಿಕೊಂಡ ಅನುದಾನದ ಬಗ್ಗೆ ಕಾಮೆಂಟ್ ಮಾಡಿದ್ದ ಚೇತನ್ ಅಹಿಂಸಾ, ಇದೀಗ ಮತ್ತೆ ಸುಮಲತಾ ಅವರ ರಾಜಕೀಯ ಮತ್ತು ಅಂಬರೀಶ್ ಸ್ಮಾರಕದ ಬಗ್ಗೆಯೇ ಮಾತನಾಡಿದ್ದಾರೆ.
ಕೋವಿಡ್ ಸಮಯದಲ್ಲಿ ಅಂಬರೀಶ್ ಸ್ಮಾರಕಕ್ಕಾಗಿ ಕೋಟ್ಯಂತರ ತೆರಿಗೆದಾರರ ಹಣವನ್ನು ತೆಗೆದುಕೊಂಡರು ಎಂದಿದ್ದಾರೆ. ಖಾಸಗಿ ಪಿಎಂ ಕೇರ್ಸ್‌ಗೆ ಮಂಡ್ಯದ ಎಂಪಿ ಲಾಡ್ಸ್ ನಿಧಿಯನ್ನು ನೀಡಿದ್ದರು. ಈಗ, ಮಂಡ್ಯ ಎಂಪಿ ಟಿಕೆಟ್ 100% ಎಂದು ತಪ್ಪಾಗಿ ಖಾತರಿಪಡಿಸಿಕೊಂಡ ನಂತರ, ಅವರು ನಾನ್ ಫ್ಯಾಕ್ಟರ್ ಆಗಿದ್ದಾರೆ. 5 ವರ್ಷಗಳಲ್ಲಿ, ಸುಮಲತಾ ಅವರು ಅತ್ಯಲ್ಪ, ಪ್ಲೇಸ್ ಹೋಲ್ಡರ್ ಸಂಸದರಾಗಿದ್ದರು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.