ಪರ ಪುರುಷನೊಂದಿಗಿನ ಅನೈತಿಕ ಸಂಬಂಧ ಬಯಲಾಗಿದ್ದಕ್ಕೆ ಮೂರು ಮಕ್ಕಳ ತಾಯಿ ವಿದ್ಯುತ್ ಕಂಬವನ್ನು ಏರಿದ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಬೆಳಕಿಗೆ ಬಂದಿದೆ. ಬುಧವಾರದಂದು ಮಹಿಳೆ ವಿದ್ಯುತ್ ಕಂಬ ಏರಿದ್ದು, ದೃಶ್ಯ ಸಮೇತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆ ಏಳು ವರ್ಷ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಾಳಿ ಕಟ್ಟಿದ ಗಂಡನಿಗೆ ತಡವಾಗಿ ಗೊತ್ತಾಗಿದೆ. ಕೊನೆಗೆ ಪತ್ನಿಯ ಅಕ್ರಮ ಸಂಬಂಧವನ್ನು ಬಹಿರಂಗ ಪಡಿಸಿದಂತೆ ಆಕೆ ವಿದ್ಯುತ್ ಕಂಬ ಏರಿ ಡ್ರಾಮಾ ಮಾಡಿದ್ದಾಳೆ ಎಂದು ಪತಿ ರಾಮ್ ಗೋವಿಂದ್ ಆರೋಪಿಸಿದ್ದಾರೆ.
ಪತಿ ರಾಮ್ ಗೋವಿಂದ್ ಕೂಲಿ ಕಾರ್ಮಿಕನಾಗಿದ್ದು, ಪತ್ನಿ ನೆರೆಯ ಗ್ರಾಮದ ಪುರುಷನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬುದು ಆತನಿಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕೊನೆಗೆ ಮನೆಗೆ ಹಣಕಾಸಿನ ಸಹಾಯಕ್ಕೆ ಇನ್ನೊಬ್ಬ ವ್ಯಕ್ತಿಗೆ ಅವಕಾಶ ನೀಡುವಂತೆ ಮಹಿಳೆ ವಿಲಕ್ಷಣ ಬೇಡಿಕೆ ಇಟ್ಟಿದ್ದಾಳೆ ಎಂದು ಗಂಡ ಆರೋಪಿಸಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯದಲ್ಲಿ ಮಹಿಳೆ ವಿದ್ಯುತ್ ಕಂಬ ಏರಿದ್ದಾಳೆ. ಆದರೆ ಇದನ್ನು ಗಮನಿಸಿದ ಜನರು ಕೆಳಗಿಳಿಯುವಂತೆ ಹೇಳಿದ್ದಾರೆ. ಕೊನೆಗೆ ಆಕೆಯನ್ನು ಕೆಳಗಿಳಿಸಿದ್ದಾರೆ.