Monday, December 9, 2024

ಇಂಟರ್ ನ್ಯಾಶನಲ್ ಕೊಲ್ಕತ್ತಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಬಾಚಿಕೊಂಡ ಚೇತನ್ ಕೆ ವಿಟ್ಲ

2023-2 024ರ ಸಾಲಿನ “ಸತ್ಯಜಿತ್ ರಿತ್ತ್ವಿಕ್ ಮ್ರಿನಲ್ ಇಂಟರ್ ನ್ಯಾಷನಲ್ ಕೊಲ್ಕತ್ತ ಫಿಲ್ಮ್ ಫೆಸ್ಟಿವಲ್’ ನಲ್ಲಿ ‘ಳ’ ಕನ್ನಡ ಕಿರುಚಿತ್ರ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.‌

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಿರುಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ಚೇತನ್ ಕೆ ವಿಟ್ಲ ರವರಿಗೆ ಪ್ರಶಸ್ತಿ ದೊರಕಿದೆ.

ಈಗಾಗಲೇ ಹಲವು ಸ್ಪರ್ಧೆಯಲ್ಲಿ ಈ ಕಿರು ಚಿತ್ರ ಪ್ರಶಸ್ತಿ ಪಡೆದಕೊಂಡಿದ್ದು ತೀರ್ಪುಗಾರರಿಂದ ಹಾಗೂ ವೀಕ್ಷಕರಿಂದ ಮೆಚ್ಚುಗೆ ಪಡೆದ ಕಿರು ಚಿತ್ರವಾಗಿದೆ.

ಇದೊಂದು ಮನುಷ್ಯನ ನೂನ್ಯತೆ ಹಾಗೂ ಅದನ್ನು ಮೆಟ್ಟಿ ನಿಂತು ಸಾಧನೆಗೈಯುವ ಸಂದೇಶವುಳ್ಳ ಈ ಕಿರು ಚಿತ್ರದಲ್ಲಿ ಕಾರ್ತಿಕ್ ಕುಮಾರ್ ರವರು ನಾಯಕ ನಟನಾಗಿ ನಟಿಸಿದ್ದು ,ಅಚಲ್ ವಿಟ್ಲರವರ ಛಾಯಾಗ್ರಹಣವಿದೆ , ಬಾತು ಕುಲಾಲ್ ರವರ ಸಂಕಲನ ಹಾಗೂ ಯಶು ಸ್ನೇಹಗಿರಿ ಸಂಗೀತ ನೀಡಿದ್ದು ಶಿವಪ್ರಕಾಶ್ ಮಿತ್ತೂರು ನಿರ್ಮಾಣ ಮಾಡಿದ್ದಾರೆ, ಈ ಕಿರು ಚಿತ್ರವು ಅನ್ನಪೂರ್ಣೇಶ್ವರಿ ಯೂಟ್ಯೂಬ್ ಚಾನೆಲ್ ಲ್ಲಿ ಬಿಡುಗಡೆಗೊಂಡಿದೆ.

Related Articles

Latest Articles