Monday, October 14, 2024

ಬಣ್ಣ ಬೆರೆಸುವಾಗ ಜಡೆ ಸಿಲುಕಿ ಮಹಿಳೆ ತಲೆಯನ್ನೇ ಕತ್ತರಿಸಿದ ಗ್ರೈಂಡರ್​​ – ಮಹಿಳೆ ಮೃತ್ಯು

ಬೆಂಗಳೂರು: ಬಣ್ಣ ಬೆರೆಸುವ ಗ್ರೈಂಡರ್​​ಗೆ ಜಡೆ ಸಿಲುಕಿ ತಲೆಗೆ ಗಂಭೀರ ಗಾಯವಾಗಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಗ್ರೈಂಡರ್​​ ತಲೆ ಕತ್ತರಿಸಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶ್ವೇತಾ (34) ಎಂಬುವರು ಮೃತ ಮಹಿಳೆ.

ನ. 7 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೆಲಗದರನಹಳ್ಳಿ ಶ್ರೀ ಪೇಂಟ್ಸ್​​ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ.

ಬಣ್ಣ ಗಟ್ಟಿಯಾಗಿದ್ದ ಕಾರಣ ಚೆಕ್​ ಮಾಡಲು ಗ್ರೈಂಡರ್​​​ ಸಮೀಪ ಮಹಿಳೆ ಬಂದಿದ್ದಳು. ಈ ಸಂದರ್ಭದಲ್ಲಿ ಜಡೆ ಗ್ರೈಂಡರ್​ಗೆ ಸಿಲುಕಿ ತಲೆ ಕಟ್​ ಆಗಿದೆ. ಈ ವೇಳೆ ಮಹಿಳೆ ಎಷ್ಟೇ ಕೂಗಾಡಿದ್ರೂ ಯಾರಿಗೂ ಕೇಳಿಸಿಲ್ಲ. ಬಳಿಕ ಕೆಲಸಗಾರರು ಬಂದು ನೋಡಿದಾಗ ಗೊತ್ತಾಗಿದೆ. ಶ್ವೇತಾ ಮಗು ಗಂಡನೊಂದಿಗೆ ಮಲ್ಲತ್ತಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಈ ಸಂಬಂಧ ಪೀಣ್ಯ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Related Articles

Latest Articles