ಕೇರಳ: ಆಲುವಾದಲ್ಲಿ 5 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದ ಅಸ್ಫಾಕ್ ಆಲಂ ಅಪರಾಧಿ ಎಂದು ಸಾಬೀತು ಆಗಿದ್ದು ಶಿಕ್ಷೆ ಖಚಿತವಾಗಿದೆ.
ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಶಿಕ್ಷೆಯ ಪ್ರಮಾಣ ನ.14ರಂದು ಮಕ್ಕಳ ದಿನಾಚರಣೆಯಂದು ಹೊರಬೀಳಲಿದೆ.
ಇಂದು, ಪ್ರಾಸಿಕ್ಯೂಷನ್ ಆರೋಪಿಗೆ ಗರಿಷ್ಠ ಮರಣದಂಡನೆಯನ್ನು ನೀಡಬೇಕು ಎಂದು ಪುನರುಚ್ಚರಿಸಿದೆ.
ಅಪರಾಧಿ ಅಸ್ಫಾಕ್ ಆಲಂ ಅತ್ಯಾಚಾರ ಮಾಡಿದ ನಂತರ 5 ವರ್ಷದ ಬಾಲಕಿಯನ್ನು ಕಸದ ರಾಶಿಗೆ ಎಸೆದು ಉಸಿರಾಡಲು ಬಿಡದೆ ಬರ್ಬರವಾಗಿ ಹತ್ಯೆ ಮಾಡಿದ್ದ. ಆತನಿಗೆ ಮರಣದಂಡನೆಯೆ ಸೂಕ್ತ ಎಂದು ಎಂದು ವಾದಿಸಿದ್ದಾರೆ.