ದಕ್ಷಿಣ ಕನ್ನಡ: ಚಲಿಸುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ಸಿನಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಕಡಬ ಅಂಚೆ ಕಚೇರಿ ಬಳಿ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ. ಕಡಬ ಸಮೀಪದ ಕಳಾರ ಕುದ್ಕೊಳಿ ನಿವಾಸಿ ಅಚ್ಚುತ ಗೌಡ (63) ಮೃತ ದುರ್ದೈವಿ.
ಕಡಬದಿಂದ ಬಸ್ ಏರಿ ಮನೆಯ ಕಡೆ ಹೊರಟಿದ್ದರು. ತಿರುವಿನಲ್ಲಿ ಆಯತಪ್ಪಿ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ. ಅವರೊಂದಿಗೆ ಬಲ್ಯದ ಚಂದ್ರ ಶೇಖರ ಎಂಬವರೂ ಕೆಳಕ್ಕೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರೆ ತೀವೃ ಗಾಯಗೊಂಡ ಅಚ್ಚುತ ಗೌಡ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತರು ಮೂಲತ ಪೆರಾಬೆ ಗ್ರಾಮದ ಬೀರಂತಡ್ಕ ನಿವಾಸಿ. ಇವರು ಕಳಾರದಲ್ಲಿ ಭೂಮಿ ಖರೀದಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
- ಚೊಚ್ಚಲ ವಿಶ್ವಕಪ್ಗೆ ಮುತ್ತಿಟ್ಟ ಭಾರತ.! ಖೋ ಖೋದಲ್ಲಿ ಮಹಿಳೆಯರು, ಪುರುಷರು ಇಬ್ಬರಿಗೂ ವರ್ಲ್ಡ್ಕಪ್
- ಸೈಫ್ ಆಲಿ ಖಾನ್ ಮೇಲೆ ಹಲ್ಲೆ – ತನಿಖೆಗೆ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ
- ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ: ವಾಹನ ಸಂಚಾರ ನಿರ್ಬಂಧ, ಪಾರ್ಕಿಂಗ್ ನಿಷೇಧ
- ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್ವಾಲ..! ಯಾವಾಗ ಗೊತ್ತೇ?
- ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಂಧಾನಕ್ಕೆ ಸಂಪರ್ಕ ಸೇತುವಾಗಿದ್ದು ವೃದ್ಧೆ.! ಸಿಕ್ರೇಟ್ ಆಗಿಯೇ ನಡೆದಿತ್ತು ಸಂಧಾನ