Tuesday, March 18, 2025

ಕಾಸರಗೋಡು: ಭೀಕರ ಅಪಘಾತ – ರಿಕ್ಷಾದಲ್ಲಿದ್ದ ಐವರು‌ ಮೃತ್ಯು

ಕಾಸರಗೋಡು: ಶಾಲಾ ಬಸ್ಸು ಮತ್ತು ಆಟೋ ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ಮೂವರು ಸಹೋದರಿಯರ ಸಹಿತ ಐವರು ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ. ಸೆ 25 ರಂದು 5 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ಮೂವರು ಸಹೋದರಿಯರು ಹಾಗೂ ಇನ್ನೊರ್ವ ಕುಟುಂಬ ಸದಸ್ಯೆ ಮಹಿಳೆ ಆಟೋ ರಿಕ್ಷಾವೊಂದರಲ್ಲಿ ಪಳ್ಳತ್ತಡ್ಕ ಬಳಿಯ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆಟೋದಲ್ಲಿದ್ದ ಐವರು ಈ ಅಪಘಾತಕ್ಕೆ ಬಲಿಯಾಗಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಆಟೋ ಚಾಲಕ ಮತ್ತು ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮತ್ತು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಸು ನೀಗಿರುವುದಾಗಿ ಮೂಲಗಳು ತಿಳಿಸಿವೆ.

Related Articles

Latest Articles