ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರಿ ವಿವಾದಕ್ಕೆ ಗ್ರಾಸವಾಗಿ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅಲ್ಜೇರಿಯಾದ ಬಾಕ್ಸರ್ Imane Khelif ಹೆಣ್ಣಲ್ಲ.. ಗಂಡು ಎಂದು ಹೇಳಲಾಗಿದ್ದು ಈ ಕುರಿತ ವೈದ್ಯಕೀಯ ವರದಿ ಸೋರಿಕೆಯಾಗಿ ವ್ಯಾಪಕ ಸುದ್ದಿಯಾಗುತ್ತಿದೆ.
ಪ್ಯಾರಿಸ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಲ್ಜೇರಿಯಾದ ಬಾಕ್ಸರ್ Imane Khelif ಭಾರಿ ಸುದ್ದಿಗೆ ಗ್ರಾಸವಾಗಿದ್ದರು. Imane Khelif ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಫೈನಲ್ ನಲ್ಲಿ ಚಿನ್ನ ಕೂಡ ಗೆದ್ದಿದ್ದರು.
ಅವರ ವಿರುದ್ಧ ಸ್ಪರ್ಧಿಸಿದ್ದ ಸ್ಪರ್ಧಿಗಳು ಅವರ ಒಂದೊಂದೇ ಹೊಡೆತಕ್ಕೆ ಸುಸ್ತಾಗಿ ಸ್ಪರ್ಧಾಕಣದಿಂದ ಹೊರ ಬಂದಿದ್ದರು. ಅತಿಥೇಯ ಇಟಲಿಯ ಮಹಿಳಾ ಬಾಕ್ಸರ್ Angela Carini ಕೂಡ ಕೇವಲ 45 ಸೆಕೆಂಡ್ ನಲ್ಲೇ ರಿಂಗ್ ನಿಂದ ಹೊರಬಂದು ಬಿಕ್ಕಿ ಬಿಕ್ಕಿ ಅತ್ತಿದ್ದರು.
ವಿವಾದಗಳ ಹೊರತಾಗಿಯೂ ಅಲ್ಜೇರಿಯಾದ ಬಾಕ್ಸರ್ Imane Khelif ಆ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.
ಆದರೆ ಇದೀಗ ಅವರ ಕುರಿತು ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದ್ದು. ಅಸಲಿಗೆ ಅಲ್ಜೇರಿಯಾದ ಬಾಕ್ಸರ್ Imane Khelif ಹೆಣ್ಣೇ ಅಲ್ಲ.. ಅವರು ಗಂಡು ಎಂದು ಹೇಳಲಾಗಿದೆ. ಈ ಕುರಿತ ವೈದ್ಯಕೀಯ ವರದಿಯೊಂದು ಸೋರಿಕೆಯಾಗಿದ್ದು, ಫ್ರೆಂಚ್ ಪತ್ರಕರ್ತ ಜಾಫರ್ ಐಟ್ ಔಡಿಯಾ ಹೊರಹಾಕಿರುವ ಮಾಹಿತಿ ಅನ್ವಯ ಅಲ್ಜೀರಿಯನ್ ಬಾಕ್ಸರ್ ಆಂತರಿಕ ವೃಷಣಗಳು ಮತ್ತು XY ಕ್ರೋಮೋಸೋಮ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ಅವರು ಹೆಣ್ಣೇ ಅಲ್ಲ. ಅವರು ಗಂಡು ಎಂದು ವಾದಿಸಿದ್ದಾರೆ. ಅಲ್ಲದೆ ಈ ಪರಿಸ್ಥಿತಿಯು 5-ಆಲ್ಫಾ ರಿಡಕ್ಟೇಸ್ ಕೊರತೆ ಎಂಬ ಅಸ್ವಸ್ಥತೆಯನ್ನು ಸೂಚಿಸುತ್ತದೆ ಎಂದು ವರದಿ ಮಾಡಿದ್ದಾರೆ.