Monday, December 9, 2024

ಲೈಂಗಿಕ ಶಕ್ತಿ ವರ್ಧಕ ಮಾತ್ರೆ ಸೇವಿಸಿ ದೌರ್ಜನ್ಯ – ಕುಸಿದು ಬಿದ್ದು ಡೈಮಂಡ್ ಫ್ಯಾಕ್ಟರಿ ಮ್ಯಾನೇಜರ್ ಮೃತ್ಯು

ಡೈಮಂಡ್ ಫ್ಯಾಕ್ಟರಿಯೊಂದರ ಮ್ಯಾನೇಜರ್ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮಾತ್ರವಲ್ಲದೆ, ಲೈಂಗಿಕ ವರ್ಧನೆ ಔಷಧಿ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಗುಜರಾತ್‌ನ ಡೈಮಂಡ್ ಫ್ಯಾಕ್ಟರಿಯೊಂದರ 41 ವರ್ಷದ ಮ್ಯಾನೇಜರ್ ನವೆಂಬರ್ 2 ರಂದು ಮುಂಬೈ ಹೋಟೆಲ್‌ನಲ್ಲಿ ಸಾವನ್ನಪ್ಪಿದ್ದು, ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮ್ಯಾನೇಜರ್ ತನ್ನ ಬಡಪಾಯಿ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸುತ್ತಿದ್ದರು. ಹಣಕಾಸಿನ ನೆರವು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿ ಮುಂಬೈಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಸಂತ್ರಸ್ತೆಯು ಸತ್ಯಾಂಶವನ್ನು ಬಾಯಿಬಿಟ್ಟಿದ್ದಾಳೆ. ಕುಟುಂಬವು ಅವನನ್ನು ನಂಬಿತ್ತು ಮತ್ತು ಅವನೊಂದಿಗೆ ನನ್ನನ್ನು ಹೊರಗೆ ಹೋಗಲು ಅವಕಾಶ ನೀಡಿದ್ದಾರೆ. ಅಕ್ಟೋಬರ್ 29 ರಂದು, ವ್ಯಕ್ತಿ ಮನೆಗೆ ಭೇಟಿ ನೀಡಿದ್ದು, ತನ್ನ ಕುಟುಂಬದೊ0ದಿಗೆ ಮುಂಬೈಗೆ ಹೋಗುವುದಾಗಿ ಹೇಳಿದ್ದಾನೆ. ಬಳಿಕ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಮುಂಬೈಗೆ ಕರೆದುಕೊಂಡು ಬಂದು ದೌರ್ಜನ್ಯ ಎಸಗಿದ್ದಾಗಿ ತಿಳಿದುಬಂದಿದೆ. ಮ್ಯಾನೇಜರ್ 14 ವರ್ಷದ ತನ್ನ ಮಗಳು ಎಂದು ಹೋಟೆಲ್‌ಗೆ ತಿಳಿಸಿದ್ದು, ಕೊಠಡಿಯೊಂದಕ್ಕೆ ತಪಾಸಣೆ ಮಾಡುವಾಗ ನಕಲಿ ಆಧಾರ್ ಕಾರ್ಡ್ ಅನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯು ಹೋಟೆಲ್ ಕೋಣೆಯಲ್ಲಿ ಲೈಂಗಿಕ ವರ್ಧಕ ಮಾತ್ರೆಗಳನ್ನು ಸೇವಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾಗ ಕುಸಿದು ಬಿದ್ದಿದ್ದಾನೆ. ಅಪ್ರಾಪ್ತೆ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಆ ವ್ಯಕ್ತಿಯನ್ನು ಜೆಜೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದ್ದು, ಪೊಲೀಸರು ಬಾಲಕಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಪೋಕ್ಸೊ ಅಡಿಯಲ್ಲಿ ಮಕ್ಕಳ ರಕ್ಷಣೆಯ ಸಂಬ0ಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related Articles

Latest Articles