ಕೋಝಿಕ್ಕೋಡ್: ಕಡಿಮೆ ಬೆಲೆ ಕಟ್ಟಡ ಸಾಮಾಗ್ರಿ ಒದಗಿಸಿಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ನೀರವ್ ಬಿ ಶಾಬ್ ಬಂಧಿತ ಆರೋಪಿ. ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಸುಮಾರು 10 ಲಕ್ಷ ರೂ ಹಣ ಪಡೆದು ವಂಚಿಸಿದ್ದಾನೆ.
ಮುಂಬೈನ ಬೊರಿವಲಿಯಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೋಝಿಕ್ಕೋಡ್ ಸಿಟಿ ಸೈಬರ್ ಕ್ರೈಂ ಪೊಲೀಸರ ನೇತೃತ್ವದ ತಂಡ ಆತನನ್ನು ವಶಕ್ಕೆ ತೆಗೆದುಕೊಂಡಿದೆ.
ಕಡಿಮೆ ಬೆಲೆಗೆ ನಿರ್ಮಾಣ ಸಾಮಗ್ರಿಗಳನ್ನು ನೀಡುವುದಾಗಿ ಭರವಸೆ ನೀಡಿ ಕಂಪನಿಯಿಂದ ಹಣ ವಸೂಲಿ ಮಾಡಿದ್ದಾನೆ. ಮುಂಗಡವಾಗಿ ನಕಲಿ ಜಿಎಸ್ ಟಿ ಬಿಲ್ ಕಳುಹಿಸಿ ವಂಚಿಸಿದ್ದಾರೆ.